ಕಾರಂತ ಥೀಮ್ ಪಾರ್ಕ್ ಬೇಸಿಗೆ ಶಿಬಿರ – ಮಾರ್ಚ್ 31 ಕ್ಕೆ ನೋಂದಾವಣೆ
ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಅವರ ಆಶ್ರಯದಲ್ಲಿ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಕರಾವಳಿ ಕಣ್ಮಣಿ ಮತ್ಸೋದ್ಯಮಿ ದಿ. ಕೆ.ಸಿ ಕುಂದರ್ ಸ್ಮರಣಾರ್ಥವಾಗಿ ಏಪ್ರಿಲ್ 21 ರಿಂದ 30ರ ತನಕ ನಡೆಯುವ 24 ನೇ ವರ್ಷದ ಬೇಸಿಗೆ ಶಿಬಿರದ ನೊಂದಾವಣೆ ಅರ್ಜಿಯನ್ನು ಕಾರಂತ ಥೀಮ್ ಪಾರ್ಕ್ ನಲ್ಲಿ ಮಾರ್ಚ್ 31 ರಂದು ಬೆಳಿಗ್ಗೆ 10 ರಿಂದ ಸಂಜೆ 6 ತನಕ ನೀಡಲಾಗುವುದು. ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಆಧಾರ್ ಕಾರ್ಡ್ ತಂದು ನೊಂದಾವಣೆ ಮಾಡಬೇಕು, ಮೊದಲು ನೊಂದಾಯಿಸಿದ 60 ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ್ ಮೇಲ್ವಿಚಾರಕರು, ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್(7829729340) ಅವರನ್ನು ಸಂಪರ್ಕಿಸಬೇಕು ಎಂದು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.