ಕೋಟ; ಡಾ||ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಖ್ಯಾತ ಯಕ್ಷಗಾನ ಸ್ತ್ರೀ ವೇಷದಾರಿ ದಿ.ಕೋಟ ವೈಕುಂಠ ಸ್ಮಾರಕ ಯಕ್ಷ ಕಿನ್ನರ ಯುವ ಪುರಸ್ಕಾರಕ್ಕೆ ಶ್ರೀ ಕೋಟ ಶಮಂತ್ ಕುಮಾರ್ ಅವರು ಆಯ್ಕೆ ಮಾಡಲಾಯಿತು.ಇವರು ಪ್ರಸ್ತುತ ಎಮ್.ಜಿ.ಮ್ ಕಾಲೇಜು ಉಡುಪಿಯಲ್ಲಿ ಉಪನ್ಯಸಾಕರಾಗಿ,ಎನ್.ಎಸ್.ಎಸ್ ಘಟಕದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾರ್ಚ್ 24 ರ ಸಂಜೆ 6ಕ್ಕೆ ಕೋಟದ ಕಾರಂತ ಥೀಮ್ ಪಾರ್ಕ್’ನಲ್ಲಿ ಹಸ್ತಾಂತರಿಸಲಾಯಿತು, ಅಂದು ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ.) ,ವಡ್ಡರ್ಸೆ ಇವರಿಂದ ರತ್ನವತಿ ಕಲ್ಯಾಣ ಯಕ್ಷಗಾನ ನಡೆಯಿತು.