ಸೋಮ ಶ್ರೀಯಾನ್ ಪಡುಕರೆ ಹಾಗೂ ನಾಗರಾಜ್ ಆಚಾರ್ಯ ಗುಂಡ್ಮಿ ರಿಗೆ ದಿ.ಕೆ.ಸಿ ಕುಂದರ್ ಸ್ಮಾರಕ ಪುರಸ್ಕಾರ
ಕೋಟ: ಡಾ||ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ ಕರಾವಳಿ ಕಣ್ಮಣಿ ದಿ.ಕೆ.ಸಿ ಕುಂದರ್ ಸ್ಮಾರಕ ಪುರಸ್ಕಾರಕ್ಕೆ ಸಾಂಪ್ರದಾಯಿಕ ಕುಲಕಸುಬು- ಪಟ್ಟ ಬಲೆ,ದೋಣಿ,ಮಾರಿ ಬಲೆ,ಬಲೆ ಬೀಸುವುದು ಕಾಯಕವನ್ನು ಸುಮಾರು 50 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸೋಮ ಶ್ರೀಯಾನ್ ಹಾಗೂ ಗುಡಿ ಕೈಗಾರಿಕೆ ಉದ್ಯಮ ಸ್ಥಾಪಿಸಿ ಇಂದು ಮನೀಷ್ ಎಂಟರ್ ಪ್ರೆಸಸ್ಸ್ ಹೆಸರಿನಲ್ಲಿ ಸ್ಮರಣಿಕೆ ಹಾಗೂ ಮರದ ಕೆತ್ತನೆಯ ಉದ್ಯಮದಲ್ಲಿ ಮನೆಮಾತಾಗಿರುವ ನಾಗರಾಜ್ ಆಚಾರ್ಯ ಗುಂಡ್ಮಿ ಅವರನ್ನು ಸಮಿತಿ ಆಯ್ಕೆ ಮಾಡಿದೆ.
ದಿ.ಕೆ.ಸಿ ಕುಂದರ್ ಸ್ಮರಣಾರ್ಥ ಏ 13 ರಿಂದ 20 ಬೇಸಿಗೆ ಶಿಬಿರವು ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ನಡೆಯಲಿದ್ದು 20 ರಂದು ಅಪರಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್ ಅಧ್ಯಕ್ಷರಾದ ಶ್ರೀ ರಘು ತಿಂಗಳಾಯ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರ ಕಟನೆಯಲ್ಲಿ ತಿಳಿಸಿದ್ದಾರೆ.