ಅಂಬೇಡ್ಕರ್ ವಿಚಾರಧಾರೆ ಇಂದಿಗೂ ದಾರೀದೀಪ-ಸುಶೀಲಾ ಸೋಮಶೇಖರ್ ಕೋಟ: ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರ ಜೀವನ,ಅಸ್ಪಶ್ಯತೆಯ ವಿರುದ್ದ ಹೋರಾಟ, ಅವರು ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆ ಇವೆಲ್ಲವೂ ಇಂದಿನ ಯುವ ಪೀಳಿಗೆಗೆ ಆದರ್ಶ ಎಂದು ಸಾಂಸ್ಕೃತಿಕ ಚಿಂತಕಿ ಸುಶೀಲ ಸೋಮ ಶೇಖರ್ ಅಭಿಪ್ರಾಯ ಪಟ್ಟರು. ಅವರು ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ವಿಕಸನ-2019 ಬೇಸಿಗೆ ಶಿಬಿರದ ಎರಡನೇ ದಿನದ ಕಾರ್ಯಕ್ರಮ ತರಬೇತಿ ಹಾಗೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್, ರಂಗಭೂಮಿ ತರಬೇತಿದಾರರಾದ ಗುಂಡ್ಮಿ ರಾಮಚಂದ್ರ ಐತಾಳ್, ಸುಧಾ ಮಣೂರು, ರಮೇಶ್ ಬೈಕಾಡಿ ವಿಕಸನ ನಾಲ್ಕು ತಂಡದ ನಾಯಕರು ಉಪಸ್ಥಿತರಿದ್ದರು. ಕುಮಾರ್ ಪ್ರಸ್ತಾವಿಸಿ ,ಶಿಬಿರಾರ್ಥಿ ಕಾರ್ತಿಕ್ ನಿರೂಪಿಸಿದರು. �