ಕೋಟ: ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ನಿಶ್ಚಿತವಾದ ಗುರಿ ಇಟ್ಟುಕೊಂಡು ಅದರಂತೆ ಮುನ್ನೆಡೆದರೆ ಸಾಧನೆ ಸಾಧ್ಯ ಎಂದು ಉದ್ಯಮಿ ಶ್ರೀಕಾಂತ್ ಶೆಣೈ ನುಡಿದರು.ಅವರು ಕಾರಂತ ಥೀಮ್ ಪಾಕರ್್ನಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಮೂರನೇ ದಿನದ ತರಬೇತಿ ಹಾಗೂ ಯುಗಾದಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಚಿತ್ರಕಲಾ ತರಬೇತಿ ಶಿಕ್ಷಕರಾದ ಗಿರೀಶ್ ಆಚಾರ್ಯ ವಕ್ವಾಡಿ, ಹರ್ಷ ಹಾಗೂ ಸುಮಾ ಕೋಟೇಶ್ವರ ಹಾಗೂ ವಿಕಸನ ನಾಲ್ಕು ತಂಡದ ನಾಯಕರು ಉಪಸ್ಥಿತರಿದ್ದರು.ಶಿಬಿರದ ಅಧಿಕಾರಿ ಕುಮಾರ್ ಪ್ರಸ್ತಾವಿಸಿದರೆ, ಶಿಬಿರಾರ್ಥಿ ಕುಮಾರಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.