ಮತದಾನ ಮಾಡದಿದ್ದರೆ ಪ್ರಶ್ನಿಸುವ ಹಕ್ಕು ಇಲ್ಲ-ಸುಬ್ರಾಯ್ ಆಚಾರ್ಯ
ಕೋಟ: ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹೊಣೆ ನಮ್ಮ ಮೇಲಿದೆ ತಪ್ಪದೇ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ನಾವು ಚಲಾಯಿಸಬೇಕು, ಮತದಾನ ಮಾಡದೇ ಪ್ರಶ್ನಿಸುವ ನೈತಿಕ ಹಕ್ಕು ನಮಗಿಲ್ಲ ಎಂದು ಉದ್ಯಮಿ ಸುಬ್ರಾಯ್ ಆಚಾರ್ಯ ನುಡಿದರು.ಅವರು ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರ ವಿಕಸನ-2019 ರ ನಾಲ್ಕನೇ ದಿನದ ತರಬೇತಿ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಗೀತಾನಂದ ಫೌಂಡೇಶನ್ ನ ಸಂಯೋಜಕ ರವಿಕಿರಣ್ ಕೋಟ ಮಾತನಾಡಿ ಬೇಸಿಗೆ ಶಿಬಿರದಂತ ಕಾರ್ಯಕ್ರಮಗಳ ಮೂಲಕ ಮಕ್ಕಳ ವಿಕಸನಕ್ಕೆ ಸಹಕರಿಯಾಗಲಿದೆ ಇದರ ಆಯೋಜಕರಿಗೆ ಧನ್ಯವಾದ ತಿಳಿಸಿದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೋಟ ಹೋಬಳಿ ಘಟಕದ ಅಧ್ಯಕ್ಷರಾದ ಸತೀಶ್ ವಡ್ಡರ್ಸೆ ವಿಕಸನ ನಾಲ್ಕು ತಂಡದ ನಾಯಕರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ವೈಭವ್ ನಿರೂಪಿಸಿ, ಶಿಬಿರದ ಅಧಿಕಾರಿ ಕುಮಾರ್ ವಂದಿಸಿದರು.