ಬೇಸಿಗೆ ಶಿಬಿರಗಳಿಂದ ಸಾರ್ಥಕತೆ ಸಾಧ್ಯ -ಜಯರಾಮ ಶೆಟ್ಟಿ
ಕೋಟ: ಬೇಸಿಗೆ ಶಿಬಿರಗಳಂತ ವಿಕಸನ ಶಿಬಿರಗಳು ಮಕ್ಕಳ ಕೌಶಲ್ಯಭಿವೃದ್ಧಿ ಹಾಗೂ ತನ್ನೊಳಗಿರುವ ಸಾಮಥ್ರ್ಯ ಬೆಳಗಳು ಒಂದು ಉತ್ತಮ ವೇದಿಕೆ, ಮಕ್ಕಳ ಪ್ರತಿಭೆ ಅನಾವರಣಗೊಂಡು ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಹಾಗೂ ಮಕ್ಕಳು ಕೃಷಿ ಚಟುವಟಿಕೆಯಲ್ಲಿ ಚಿಕ್ಕಂದಿನಿಂದ ಆಸಕ್ತಿ ವಹಿಸಿಕೊಳ್ಳಿ ಎಂದು ಪ್ರಗತಿಪರ ಕೃಷಿಕ ಜಯರಾಮ್ ಶೆಟ್ಟಿ ತಿಳಿಸಿದರು.ಅವರು ಕಾರಂತ ಥೀಮ್ ಪಾರ್ಕ್ ನಡೆಯುತ್ತಿರುವ ಬೇಸಿಗೆ ಶಿಬಿರ ವಿಕಸನ- 2019 ರ ಐದನೇ ದಿನದ ತರಬೇತಿ ಹಾಗೂ ಟ್ಯಾಲೆಂಟ್ ಶೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಶಿಬಿರದ ಸಂಪನ್ಮೂಲ ತರಬೇತುದಾರರಾದ ಗಿರೀಶ್ ವಕ್ವಾಡಿ ಸೂರಜ್ ಹೆಮ್ಮಾಡಿ ,ಹಾಗೂ ವಿಕಸನ ನಾಲ್ಕು ತಂಡದ ನಾಯಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನುಶಿಬಿರಾರ್ಥಿಚಂದ್ರಿಕಾ ನಿರೂಪಿಸಿ ಶಿಬಿರಧಿಕಾರಿ ಕುಮಾರ್ ಪ್ರಸ್ತಾಪಿಸಿದರು.