ಕಾರಂತ ಥೀಮ್ ಪಾರ್ಕ್-ಮಕ್ಕಳ ನಡಿಗೆ ಮತದಾನ ಜಾಗೃತಿ ಕಡೆಗೆ
ಮತದಾನ ಜಾಗೃತಿ
ಕೋಟ;ಕಡಲ ತಡಿಯ ಭಾರ್ಗವ ಡಾ ಕೋಟಶಿವರಾಮ ಕಾರಂತರ ಹೆಸರಿನಲ್ಲಿ ನಿರ್ಮಾಣಗೊಂಡ ಥೀಂ ಪಾಕ್೯ ಒಂದಲ್ಲ ಒಂದು ರೀತಿಯಲ್ಲಿ ಜನಮನ್ನಣೆ ಗಳಿಸಿದೆ ಅದು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹಿಡಿದು ಜನಪಯೋಗಿ ಕಾರ್ಯಗಳಿಗೆ ಥೀಂ ಪಾಕ್೯ ಹೆಸರುವಾಸಿಯಾಗಿದೆ.
ಕಳೆದ ಹಲವು ವರ್ಷಗಳಿಂದ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಡೆಯುವ ಬೇಸಿಗೆ ಶಿಬಿರಾರ್ಥಿಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಕಾರ್ಯಕ್ರಮಗಳನ್ನು ನೀಡುತ್ತಿವೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾನ ಜಾಗೃತಿ ಆಂದೋಲ ಹಮ್ಮಿಕೊಂಡು ಜಿಲ್ಲಾಡಳಿತದ ಪ್ರಶಂಸೆಗೆ ಕಾರಣವಾಗಿದೆ.ಈ ಬಾರಿ ಬೇಸಿಗೆ ಶಿಬಿರದಲ್ಲಿ ಸಾಕಷ್ಟು ಶಿಬಿರಾರ್ಥಿಗಳು ಸೇರಿಕೊಂಡು ಲೋಕಸಭಾ ಚುನಾವಣೆ ಜಾಗೃತಿ ರ್ಯಾಲಿ ಹಮ್ಮಿಕೊಂಡಿದೆ ಇದು ಕಾರಂತ ಥೀಂ ಪಾಕ್೯ ನಿಂದ ಹಿಡಿದು ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಟತ್ತಟ್ಟು ಗ್ರಾಮಪಂಚಾಯತ್ ವರೆಗೆ ಕಾಲ್ನಡಿಗೆ ರ್ಯಲಿಯಲ್ಲಿ ಬಂದು ಪಂಚಾಯತ್ ವ್ಯಾಪ್ತಿಯ ಚುನಾವಣಾ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಸಾಂಗವಾಗಿ ಮತದಾನ ನಡೆಯಬೇಕು,ಯಾವುದೇ ಪಕ್ಷಗಳ ಹಣದ ಆಮಿಷಕ್ಕೆ ಬಲಿಯಾಗಬಾರದು,ಮತದಾನ ನಮ್ಮೆಲ್ಲ ಆದ್ಯ ಕರ್ತವ್ಯ ಎಂಬ ಬಿತ್ತಿ ಪತ್ರವನ್ನು ಹಿಡಿದ ಮಕ್ಕಳು ಘೋಷಣೆಗಳನ್ನು ಕೂಗಿ ವಿವಿಧ ಅಂಗಡಿಗಳಿಗೆ ತೆರಳಿ ಮೆರವಣಿಗೆಯನ್ನು ಸಂಪನ್ನಗೊಳಿಸಿದರು.
ರೋಟರಿ ಕ್ಲಬ್ ಕೋಟ ಸಿ ಟಿ ಕಾರ್ಯದರ್ಶಿ ಎಂ.ಸುಬ್ರಾಯ ಆಚಾರ್ಯ ಈ ಕಾರ್ಯಕ್ರಮ ಬೆಂಬಲ ನೀಡಿ ಚಾಲನೆ ನೀಡಿದರು.ಪರಿಸರವಾದಿ ಕೊ.ಗಿ.ನಾ ಮಾತನಾಡಿ ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ ಅದನ್ನು ನಮ್ಮಿಷ್ಟದವರಿಗೆ ಹಾಕುವ ಮೂಲಕ ಯಾವುದೇ ಹಣದ ಆಮಿಷಗಳಿಗೆ ಎಡಮಾಡಿಕೊಡದೆ ಮತದಾನದ ಮಹತ್ವವನ್ನು ಹೆಚ್ಚಿಸಬೇಕಾಗಿದೆ.ಇದಕ್ಕಾಗಿ ನಾವೆಲ್ಲರು ಕಟಿಬದ್ಧರಾಗೋಣ ಎಂದು ಆಶಿಸಿದರು.ಥೀಂ ಪಾಕ್೯ ಮೇಲುಸ್ತುವಾರಿ ಪ್ರಶಾಂತ್ ಪೂಜಾರಿ, ಭರತ್ ಗಾಣಿಗ,ಶ್ರೀಧರ ಗಾಣಿಗ,ಕಾರಂತ ಟ್ರಸ್ಟ್ ನ ಸತೀಶ್ ವಡ್ಡರ್ಸೆ, ಮತ್ತಿತರರು ಉಪಸ್ಥಿತರಿದ್ದರು ♦