ಶ್ರೀಮತಿ ಮಾಲಿನಿ ರಮೇಶ್ ಹಾಗೂ ಶ್ರೀ ಸುರೇಶ್ ಕಾರ್ಕಡ ಅವರಿಗೆ ದಿ.ಪಿ.ಕಾಳಿಂಗ ರಾವ್ ಸ್ಮಾರಕ ಪುರಸ್ಕಾರ
ಕೋಟ:ಡಾ. ಕಾರಂತ ಪ್ರತಿಷ್ಠಾನ (ರಿ) ಕೋಟ,ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ನಾದ ಗಾರುಡಿಗ ದಿ.ಪಾಂಡೇಶ್ವರ ಕಾಳಿಂಗ ರಾವ್ ಸ್ಮಾರಕ ಪುರಸ್ಕಾರಕ್ಕೆ ಸ.ಕಿ.ಪ್ರಾ.ಶಾಲೆ ಗೋಳಿಬೆಟ್ಟು ಶಿಕ್ಷಕಿ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಧಾರೆ ಎರೆದಿರುವ ಬಹುಶ್ರುತ ಕಲಾವಿದೆ ಶ್ರೀಮತಿ ಮಾಲಿನಿ ರಮೇಶ್ ಹಾಗೂ ಭರವಸೆ ಗಾಯಕರಾಗಿ ಹಲವು ಕವಿತೆಗಳಿಗೆ ಜೀವ ತುಂಬಿ ಹಾಡುವ ಅಭಿನವ ಅಶ್ವಥ್ ಎಂದು ಜನಪ್ರಿಯರಾಗಿರುವ ಹಲವಾರು ಧ್ವನಿ ಸಾಂದ್ರಿಕೆ ಹೊರ ತಂದಿರುವ ಸಾಸ್ತನ ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿರುವ ಶ್ರೀ ಸುರೇಶ್ ಕಾರ್ಕಡ ಅವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.ಮೇ 10 ರಂದು ಕಾರಂತ ಥೀಮ್ ಪಾರ್ಕ್ ಸಮಾರಂಭ ನಡೆಯಲಿದ್ದು ಪುರಸ್ಕಾರ ಪ್ರದಾನ ಮಾಡಲಾಗುವುದೆಂದುಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ರಘು ತಿಂಗಳಾಯ,ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.