ರಜೆಯ ಸದುಪಯೋಗದಿಂದ ವಿಕಸನ-ಸುಬ್ರಾಯ್ ಆಚಾರ್ಯ
ಕೋಟ: ಮಕ್ಕಳು ಬೇಸಿಗೆ ರಜೆಯನ್ನು ಮೊಬೈಲ್,ಟಿ.ವಿ ಎಂದು ಕಾಲ ವ್ಯರ್ಥ ಮಾಡದೆ ಬೇಸಿಗೆ ಶಿಬಿರದಂತಹ ವ್ಯಕ್ತಿತ್ವ ವಿಕಸನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ವಿಕಸನ ಸಾಧ್ಯ ಎಂದು ಕಾರಂತ ಥೀಮ್ ಪಾರ್ಕ್ ಟ್ರಸ್ಟಿ ಸುಬ್ರಾಯ್ ಆಚಾರ್ಯ ನುಡಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಉಡುಪಿ, ರಾಜ್ಯ ಬಾಲಭವನ ಬೆಂಗಳೂರು,ತಾಲೂಕು ಬಾಲಭವನ ಸಮಿತಿ,ಸಮಗ್ರ ಶಿಶು ಅಭಿವೃಧ್ಧಿ ಯೋಜನೆ ಬ್ರಹ್ಮಾವರ,ಕಾರಂತ ಪ್ರತಿಷ್ಠಾನ(ರಿ) ಕೋಟ ಇವರ ಸಂಯಕ್ತ ಆಶ್ರಯದಲ್ಲಿ ನಡೆಯುತ್ತಿರುವ 2018-19ನೇ ಸಾಲಿನ ವಾರಾಂತ್ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೋಭಾ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಕುಮಾರ್ ಸಾಲಿಗ್ರಾಮ, ಚಿತ್ರಕಲಾ ಶಿಕ್ಷಕ ಗಿರೀಶ್ ವಕ್ವಾಡಿ,ಮೇಲ್ವಿಚಾರಕಿ ಶ್ರೀಮತಿ ಲಕ್ಮೀ, ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್,ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರುಹಾಗೂ ಸಹಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಿರಿಯ ಮೇಲ್ವಿಚಾರಕಿ ಶ್ರೀಮತಿ ಕೆ.ಲೀಲಾ ನಿರೂಪಿಸಿ, ಶ್ರೀಮತಿ ಸವಿತಾ ವಂದಿಸಿದರು.