ಕಾರಂತ ಥೀಮ್ ಪಾರ್ಕ್ ಗೆ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ
ಕೋಟ: ಜ್ಞಾನಪೀಠ ಪುರಸ್ಕೃತ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ನೀಡಿದರು.ಗಾಡಿ ಕೂಸಣ್ಣನ ಎತ್ತಿನ ಗಾಡಿ,ಕಾರಂತರ ಪುತ್ಥಳಿ,ರಂಗಮಂದಿರ,ಆರ್ಟ್ ಗ್ಯಾಲರಿ,ಅಂಗನವಾಡಿ,ಗ್ರಂಥಾಲಯ ವೀಕ್ಷಿಸಿದರು.ಕಾರಂತರಿಗೆ ಕಾರಂತರೇ ಸರಿಸಾಟಿ, ಕನ್ನಡ ಸಾಹಿತ್ಯ ಲೋಕಕ್ಕೆ ಕಾರಂತರ ಕೊಡುಗೆ ಅನನ್ಯವಾದದು,ಥೀಮ್ ಪಾರ್ಕ್ ನಲ್ಲಿ ನಡೆಯುವ ತರಬೇತಿ-ಚಟುವಟಿಕೆಗಳು ಇನ್ನಷ್ಟು ಜನರಿಗೆ ತಲುಪುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ,ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್,ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ,ಹಾಗೂ ಸದಸ್ಯರು,ಕಾರಂತ ಥೀಮ್ ಪಾರ್ಕ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು