ಯುವ ಜನತೆ ಕೃಷಿ ಕಡೆ ಒಲವು ಮೂಡಿಸಿಕೊಳ್ಳಿ-ರವೀಂದ್ರ ಐತಾಳ್
ದಿ.ಉಪೇಂದ್ರ ಐತಾಳ್ ಸ್ಮಾರಕ ಕೃಷಿ ಪರಿಶ್ರಮ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಕಿವಿಮಾತು
ಕೋಟ:ಯುವ ಜನತೆ ಕೃಷಿ ಕೆಲಸದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದರೊಂದಿಗೆ ತೊಡಗಿಕೊಳ್ಳಬೇಕು,ಕೃಷಿ ಎಂದರೆ ತಾತ್ಸಾರ ಭಾವನೆ ಬಿಡಬೇಕು ವಿದ್ಯಾರ್ಥಿ ಜೀವನದಲ್ಲಿ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಮೂಡಿಸಿಕೊಳ್ಳಿ ಎಂದು ಪ್ರಗತಿಪರ ಕೃಷಿಕ ಶ್ರೀ ರವೀಂದ್ರ ಐತಾಳ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅವರು ಡಾ|| ಕಾರಂತ ಪ್ರತಿಷ್ಠಾನ(ರಿ)ಕೋಟ,ಡಾ|| ಕಾರಂತ ಟ್ರಸ್ಟ್(ರಿ) ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ ದಿ.ಉಪೇಂದ್ರ ಐತಾಳ್ ಸ್ಮಾರಕ ಕೃಷಿ ಪರಿಶ್ರಮ ಪುರಸ್ಕಾರ ಪ್ರದಾನ ಮಾಡಿ ಮಾತಾನಾಡುತ್ತಿದ್ದರು.
ಮೀನುಗಾರಿಕೆಯೊಂದಿಗೆ ಕೃಷಿ ಮಾಡುತ್ತಿರುವ ಪ್ರಗತಿಪರ ಕೃಷಿಕ ಶ್ರೀ ಕೃಷ್ಣ ಮರಕಾಲ ಪಾರಂಪಳ್ಳಿ ಹಾಗೂ ಕೃಷಿಯೊಂದಿಗೆ ಸ್ವಚ್ಚತೆ ಅಭಿಯಾನದಲ್ಲಿ ತನ್ನನ್ನು ತೊಡಗಿಸಿಕೊಂಡ ಬಹುಮುಖಿ ರೇವತಿ ತೆಕ್ಕಟ್ಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ,ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಪ್ರಜ್ಞಾ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಶ್ರೀ ಪ್ರಕಾಶ್ ಭಟ್, ವಿವೇಕ ಬಾಲಕಿಯರ ಫ್ರೌಡ ಶಾಲೆ ಮುಖ್ಯೋಪಾಧ್ಯಯ ಜಗದೀಶ ಹೊಳ್ಳ,ಚೇತನಾ ಫ್ರೌಡಶಾಲೆ ಹಂಗಾರಕಟ್ಟೆಯ ಮುಖ್ಯೋಪಾಧ್ಯಯ ಗಣೇಶ್, , ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೆಂಕಟೇಶ್ ಭಟ್ ಸ್ವಾಗತಿಸಿದರು,ಕಾರಂತ ಪ್ರತಿಷ್ಠಾನದಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.