ಕಾರಂತ ಥೀಮ್ ಪಾರ್ಕ್ ಗೆ ಬಿಗ್ ಬಾಸ್ ಖ್ಯಾತಿಯ ಶ್ರೀ ಧನರಾಜ್ ಪೂಜಾರಿ ಭೇಟಿ

ಕೋಟ:ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಬಿಗ್ ಬಾಸ್ ಖ್ಯಾತಿಯ ಧನರಾಜ್ ಪೂಜಾರಿ ಅವರು ಇತ್ತೀಚೆಗೆ ಭೇಟಿ ನೀಡಿದರು.ಭೇಟಿ ನೀಡಿ ಆರ್ಟ್ ಗ್ಯಾಲರಿ,ಸಭಾಂಗಣ,ಅಂಗನವಾಡಿ,ಗ್ರಂಥಾಲಯಗಳನ್ನು ವೀಕ್ಷಿಸಿದರು.ಕಾರಂತ ಥೀಮ್ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತದೆ.ಕಾರಂತರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ,ಅವರ ಹೋರಾಟ,ಅವರು ಬದುಕಿದ ರೀತಿ,ಯಕ್ಷಗಾನಕ್ಕೆ ಅವರ ಕೊಡುಗೆ ಎಲ್ಲಾವೂ ಮುಂದಿನ ಪೀಳಿಗೆಗೆ ತಲುಪಬೇಕು ಆ ಉದ್ದೇಶದಿಂದ ಇನ್ನಷ್ಟೂ ಅಭಿವೃದ್ದಿ ಆಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು,ಕಾರಂತ ಥೀಮ್ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

