ಕಾರಂತ ಥೀಮ್ ಪಾರ್ಕ್ ನಲ್ಲಿ ನವೆಂಬರ್ 14 ರಂದು 64 ನೇ ಕನ್ನಡ ರಾಜ್ಯೋತ್ಸವ-ಕಾರಂತ ಸಂಸ್ಮರಣೆ ಸಾಂಸ್ಕೃತಿಕ ವೈಭವ ಸಮಾರಂಭ ದೀವಿಗೆ-2019(ಕನ್ನಡ ಅಭಿಯಾನ) ವಿಶೇಷ ಕಾರ್ಯಕ್ರಮ

ಕೋಟ: ಕನ್ನಡ ಸಂಘ(ನೋಂ)ವಾಣಿಜ್ಯ ತೆರಿಗೆಗಳ ಇಲಾಖೆ ,ಗಾಂಧಿನಗರ,ಬೆಂಗಳೂರು ಪ್ರಸ್ತುತಿ,ಕಾರಂತ ಪ್ರತಿಷ್ಥಾನ(ರಿ) ಕೋಟ,ಕೋಟತಟ್ಟು ಗ್ರಾಮ ಪಂಚಾಯತ್,ಕಾರಂತ ಟ್ರಸ್ಟ್(ರಿ) ಉಡುಪಿ ಇವರ ಸಹಯೋಗದಲ್ಲಿ 64 ನೇ ಕನ್ನಡ ರಾಜ್ಯೋತ್ಸವ -ಕಾರಂತ ಸಂಸ್ಮರಣೆ ಸಾಂಸ್ಕೃತಿಕ ವೈಭವ ಸಮಾರಂಭ ದೀವಿಗೆ-2019(ಕನ್ನಡ ಅಭಿಯಾನ) ವಿಶೇಷ ಕಾರ್ಯಕ್ರಮ ನವೆಂಬರ್ 14 ರಂದು ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ಸಂಜೆ 5.30ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ.ವಿ.ರವಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು(ಕೇಂ.ಕ)-1 ,ಬೆಂಗಳೂರು,ವಹಿಸಲಿದ್ದು.ಶ್ರೀ ಯು.ಎಸ್.ಶೆಣೈ ಅವರು ಡಾ|| ಶಿವರಾಮ ಕಾರಂತರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ,ವಿಶೇಷ ಆಹ್ವಾನಿತರಾಗಿ ಶ್ರೀ ಸಿ.ಎನ್.ಶಿವ ಪ್ರಕಾಶ್,ಅಧ್ಯಕ್ಷರು,ವಾಣಿಜ್ಯ ತೆರಿಗೆಗಳ ಸೇವಾ(ಅಧಿಕಾರಿಗಳ)ಸಂಘ(ರಿ) ಬೆಂಗಳೂರು,ಶ್ರೀ ಆನಂದ್ ಸಿ ಕುಂದರ್,ಕಾರ್ಯಾಧ್ಯಕ್ಷರು ಕಾರಂತ ಪ್ರತಿಷ್ಠಾನ(ರಿ) ಕೋಟ,ಶ್ರೀ ಎಂ.ವಿ.ನೀಲಕಂಠ ಮೂರ್ತಿ,ಅಧ್ಯಕ್ಷರು,ವಾಣಿಜ್ಯ ತೆರಿಗೆ ಇಲಾಖೆ ಸಿ ಮತ್ತು ಡಿ ದರ್ಜೆ ನೌಕರರ ಸಂಘ(ರಿ) ಬೆಂಗಳೂರು,ಶ್ರೀ ಎಂ.ಶಶಿಧರ ,ಅಧ್ಯಕ್ಷರು,ವಾಣಿಜ್ಯ ತೆರಿಗೆ ಇಲಾಖೆ ಸಿ ಮತ್ತು ಡಿ ದರ್ಜೆ ನೌಕರರ ಸಂಘ(ರಿ)ಮಂಗಳೂರು ವಿಭಾಗ,ಶ್ರೀ ಕೆ.ದೊರೈ ಅಧ್ಯಕ್ಷರು ವಾಣಿಜ್ಯ ತೆರಿಗೆ ಇಲಾಖೆ ಎಸ್ಸಿ/ಎಸ್ಟಿ ಕ್ಷೇಮಾಭಿವೃದ್ಧಿ ಸಂಘ(ರಿ.)ಬೆಂಗಳೂರು ಪಾಲ್ಗೊಳಲಿದ್ದು,ಘನ ಉಪಸ್ಥಿತಿಯಲ್ಲಿ ಶ್ರೀಮತಿ ಮೀರಾ ಸುರೇಶ್ ಪಂಡಿತ್ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಆಡಳಿತ) ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿ,ಮಂಗಳೂರು,ಶ್ರೀ ಡಿ.ವಿ.ಉದಯಶಂಕರ್,ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು(ಜಾರಿ)ಪಶ್ಚಿಮ ವಲಯ ಮಂಗಳೂರು,ಶ್ರೀಮತಿ ಕೆ.ಎಂ.ಸುಲೋಚನ ವಾಣಿಜ್ಯ ತೆರಿಗಗಳ ಜಂಟಿ ಆಯುಕ್ತರು(ಮನವಿಗಳು),ಮಂಗಳೂರು,ಶ್ರೀ ರಘು ತಿಂಗಳಾಯ,ಅಧ್ಯಕ್ಷರು,ಕೋಟತಟ್ಟು ಗ್ರಾಮ ಪಂಚಾಯತ್,ಶ್ರೀ ಮಲ್ಲಪ್ಪ ಬಿ.ಕಣಗಿನಹಾಳ,ಅಧ್ಯಕ್ಷರು,ಕನ್ನಡ ಸಂಘ(ನೋಂ)ವಾಣಿಜ್ಯ ತೆರಿಗೆ ಇಲಾಖೆ,ಬೆಂಗಳೂರು ಭಾಗವಹಿಸಲಿದ್ದಾರೆ.
ಸಮಾಜಮುಖಿ ಕಾರ್ಯಕ್ರಮಗಳ ಅಡಿಯಲ್ಲಿ ಅಪ್ಪ-ಅಮ್ಮ ಅನಾಥಾಲಯ ಗಿರಿಜಾಕೃಷ್ಣ ಪೂಜಾರಿ ಚಾರಿಟಬಲ್ ಟ್ರಸ್ಟ್(ರಿ) ಕೂರಾಡಿ,ಬ್ರಹ್ಮಾವರ,ಮಾನಸಜ್ಯೋತಿ ಟ್ರಸ್ಟ್(ರಿ) ಕೋಣಿ ಕುಂದಾಪುರ,ಹೊಸಬೆಳಕು ಅನಾಥಾಶ್ರಮ,ಉಡುಪಿ.ಈ ಮೂರು ಸಂಸ್ಥೆಗಳಿಗೆ ಇಲಾಖೆಯ ಕನ್ನಡ ಸಂಘದಿಂದ ದೇಣಿಗೆ ಸಮರ್ಪಣೆ ಮಾಡಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ವಾಣಿಜ್ಯ ತೆರಿಗೆ ಇಲಾಖೆಯ ಮಂಗಳೂರು ವಿಭಾಗದ ಕಲಾವಿದರಿಂದ ಹುಲಿ ವೇಷ ಕುಣಿತ,ಸಮೂಹ ಗಾಯನ,ನೃತ್ಯ ಕಾರ್ಯಕ್ರಮ ಹಾಗೂ ನೆನಪು ಪ್ರತಿಷ್ಥಾನ(ರಿ) ಸಾಸ್ತಾನ ಇವರಿಂದ ಗಾನ-ನಾಟ್ಯ-ರಿಂಗಣ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

