

ಕೋಟ:ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ,ಕೋಟತಟ್ಟು ಗ್ರಾಮ ಪಂಚಾಯತ್,ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ ,ಕ್ರಿಯೆಟಿವ್ ಸ್ಕೂಲ್ ಆಫ್ ಆರ್ಟ ಇವರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಜನವ ರಿ 26ರಂದು ಅಪರಾಹ್ನ 2 ಕ್ಕೆ ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯಲಿದೆ. ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಸಬ್ ಜೂನಿಯರ್ 1 ರಿಂದ 3ನೇ ತರಗತಿ,ಜೂನಿಯರ್ 4 ರಿಂದ 6 ನೇ ತರಗತಿ,ಸೀನಿಯರ್ 7 ರಿಂದ 10 ನೇ ತರಗತಿ ವಿಭಾಗದಲ್ಲಿ ನಡೆಯಲಿದೆ.
ಸಬ್ ಜೂನಿಯರ್ ಮತ್ತು ಜೂನಿಯರ್ ವಿಭಾಗದ ವಿದ್ಯಾರ್ಥಿಗಳಿಗೆ ಐಚ್ಚಿಕ ವಿಷಯವಾಗಿದ್ದು,ಸೀನಿಯರ್ ಸ್ಪರ್ಧಾಳುಗಳಿಗೆ ಸ್ಥಳದಲ್ಲಿಯೇ ಸ್ಪರ್ಧಾ ವಿಷಯ ನೀಡಲಾಗುವುದು.ಸ್ಪರ್ಧಾಗಳಿಗೆ ಡ್ರಾಯಿಂಗ್ ಶೀಟ್ ನೀಡಲಾಗುವುದು ಉಳಿದ ಎಲ್ಲಾ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ತರಬೇಕು.ಪೆನ್ಸಿಲ್ ಶೇಡಿಂಗ್ ಗೆ ಅವಕಾಶವಿರುವುದಿಲ್ಲ.ಸ್ಪರ್ಧಾಳುಗಳು ಸ್ಪರ್ಧೆಯ ದಿನ ಆಧಾರ್ ಕಾರ್ಡ್ ಅಥವಾ ಶಾಲಾ ಗುರುತಿನ ಚೀಟಿ ನೀಡಿ ವಿಭಾಗವನ್ನು ಧೃಡೀಕರಿಸಬೇಕು
.ಹೆಚ್ಚಿನ ಮಾಹಿತಿಗಾಗಿ ಗಿರೀಶ್ ವಕ್ವಾಡಿ,ಚಿತ್ರಕಲಾ ಶಿಕ್ಷಕರು(9480722636),ಪ್ರಶಾಂತ್ ಮೇಲ್ವಿಚಾರಕರು ಕಾರಂತ ಥೀಮ್ ಪಾರ್ಕ್(7829729340) ಇವರನ್ನು ಸಂಪರ್ಕಿಸಬಹುದೆಂದು ಕಾರಂತ ಪ್ರತಿಷ್ಠಾನ ದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್,ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ,ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ರಘು ತಿಂಗಳಾಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

