ಕೋಟ ಎಂಬ ಊರಿನ ಹೆಸರು ಕೇಳಿರದವರು ತುಂಬ ಕಡಿಮೆ. ಯಾಕೆಂದರೆ ಈ ಊರಿನ ಹೆಸರನ್ನು ಜಗತ್ತಿನಾದ್ಯಂತ ಹರಡಿಸಿದ ಮೊದಲ ಕೀರ್ತಿ ಕೋಟ ಡಾ| ಶಿವರಾಮ ಕಾರಂತರಿಗೆ ಸಲ್ಲಬೇಕು. ಕಾರಂತರ ಪರಿಚಯವಿಲ್ಲದ ಮಂದಿ ತುಂಬ ಕಡಿಮೆ. ಯಾಕೆಂದರೆ ಕಾರಂತರು ಕೈಯಾಡಿಸದ ಕ್ಷೇತ್ರ ಯಾವುದೂ ಇಲ್ಲ. ಸಾಹಿತ್ಯ, ನಾಟಕ, ಯಕ್ಷಗಾನ, ಕಾದಂಬರಿ, ಕಥಾ ಸಂಕಲನ, ಆತ್ಮಕಥೆಗಳು, ವಿಜ್ಞಾನ, ಪತ್ರಿಕಾರಂಗ ಹೀಗೆ ಹೇಳುತ್ತ ಹೋದರೆ ಸಮಯ ನಿಲ್ಲದು. ಆಡು ಮುಟ್ಟದ ಸೊಪ್ಪಿಲ್ಲ; ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ. ಕಾರಂತರ ಹುಟ್ಟೂರು ಇಂದು ಕೋಟ ಮಂಡಲ ಪಂಚಾಯಿತಿಯಿಂದ ವಿಂಗಡಣೆಯಾಗಿ ಕೋಟತಟ್ಟು ಗ್ರಾಮ ಪಂಚಾಯತ್ ಆಗಿ ವಿಜೃಂಭಿಸುತ್ತಿದೆ. ಕಾರಂತ ಥೀಂ ಪಾರ್ಕ್ ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಿಲ್ಲಿ ತಲೆ ಎತ್ತಿ ಪ್ರವಾಸಿಗರನ್ನು, ಸಾಹಿತ್ಯಾಭಿಮಾನಿಗಳನ್ನು, ಪುಟಾಣಿ ಮಕ್ಕಳಿಂದ ಹಿಡಿದು ಅನೇಕ ಹಿರಿ-ಕಿರಿಯ ತಲೆಗಳನ್ನು ತನ್ನತ್ತ ಆಕರ್ಷಿಸುತ್ತಿದೆ, ಕೈ ಬೀಸುತ್ತಿದೆ. ಬನ್ನಿ ನಿಮಗೆ ಥೀಂ ಪಾರ್ಕ್ ನ ಪರಿಚಯ ಹೇಳಿಕೊಳ್ಳುತ್ತ ಇಲ್ಲಿನ ವಿವಿಧ ಮಗ್ಗಲುಗಳನ್ನು ವಿವರವಾಗಿ ಪ್ರಿಯ ಓದುಗ ಮಿತ್ರರಿಗೆ ಹೇಳಬಯಸುತ್ತೇನೆ. ಇಲ್ಲಿಗೆ ಸಮೀಪಿಸುತ್ತಲೆ ನಿಮ್ಮ ಮನ ಸೂರೆಗೊಳ್ಳುವಂತ ಹೊರಾಂಗಣ ಸೌಂದರ್ಯ ನಿಮ್ಮನ್ನು ತನ್ನತ್ತ ಬಹುಬೇಗ ದಾಪುಗಾಲು ಇಡುವಂತೆ ನಿಮ್ಮ ಮನ ಒಲಿಸುವಲ್ಲಿ ಥೀಂ ಪಾರ್ಕ್ ಯಶಸ್ವಿಯಾಗುತ್ತದೆ. ಇದರ ಪ್ರವೇಶ ದ್ವಾರದ ಒಳಬರುವ ಮೊದಲೇ ಹೊರಾಂಗಣದ ಎಡಬಲಗಳಲ್ಲಿ ಸಾಂಸ್ಕೃತಿಕ ಉಬ್ಬು ಕಲಾಕೃತಿಗಳು ನಿಮ್ಮ ಗಮನ ಸೆಳೆಯುತ್ತದೆ. ಹಾಗೆ ಒಳಪ್ರವೇಶಿಸುತ್ತಲೇ ನಿಮ್ಮನ್ನು ಸ್ವಾಗತಿಸಲು ದೇವದಾರಿ ಮರದ ಕಟ್ಟೆ ಮೇಲಿರುವ ಥೀಂ ಪಾರ್ಕ್ ಹೆಸರಿರುವ ಕಲ್ಲಿನ ಫಲಕ ಹಾಗೂ ಒಂದು ಅಜ್ಜಿ ಪುಟಾಣಿ ಮಕ್ಕಳಿಗೆ ಕಥೆ ಹೇಳುತ್ತಿರುವ ಸಿಮೆಂಟಿನಿಂದ ಮಾಡಿರುವ ಕಲಾಕೃತಿ ಇದೆ. ಹಾಗೆ ಮರದ ಕೆಳಗೆ ವಿಶ್ರಾಂತಿ ಪಡೆಯಲು ಕಲ್ಲಿನ ಬೆಂಚುಗಳು ಹೊರ ಆವರಣದಲ್ಲಿ ಸಿಗುತ್ತವೆ. ಇನ್ನು ಒಂದೊಂದೇ ವಿವರವನ್ನು ಹೇಳುತ್ತೇನೆ ಬನ್ನಿ. ದೇವದಾರಿ ಮರವನ್ನು ದಾಟಿ ಎಡಕ್ಕೆ ತಿರುಗಿದರೆ ಮೊದಲು ಸಿಗುವುದು ‘ಕಾರಂತ ಸಿರಿ’ ಮಳಿಗೆ. ನಿಮಗೆ ಎದುರಾಗುತ್ತದೆ. ಅಲ್ಲಿ ಗುಡಿ ಕೈಗಾರಿಕೆಯಿಂದ ನಿರ್ಮಿತವಾದ ವಸ್ತುಗಳು ಹಾಗೂ ಅನೇಕ ಸಾಹಿತಿಗಳ ಪುಸ್ತಕ ಮಾರಾಟ ಮಳಿಗೆ, ಕರಕುಶಲ ವಸ್ತುಗಳನ್ನು ನೀವು ಕೊಳ್ಳಬಹುದು. ಹಾಗೆಯೇ ಅಂಗಡಿಯಿಂದ ಹೊರ ಬಂದು ನಿಮ್ಮ ಕತ್ತನ್ನು ಮೇಲೆತ್ತಿದರೆ ನಿಮಗೆ ಕಾಣಸಿಗುವುದು ಯಕ್ಷಗಾನದ ಜಟಾಯು. ಇದು ಸಿಮೆಂಟಿನಿಂದ ನಿರ್ಮಿತವಾಗಿದೆ. ಆದರೆ ಇದು ಏನು? ಕಾರಂತರಿಗೂ ಜಟಾಯುವಿಗೂ ಏನು ಸಂಬಂಧ ಎನ್ನುವ ಯೋಚನೆ ನಿಮ್ಮ ಮನದಲ್ಲಿ ಮೂಡುವುದು ಸಹಜ. ಹೇಳುತ್ತೇನೆ ಕೇಳಿ. ನಾನು ಮೊದಲೇ ಹೇಳಿದ ಹೇಗೆ ಕಾರಂತರು ಬಹುಮುಖ ಪ್ರತಿಭೆ ಕರಾವಳಿ ಜಿಲ್ಲೆಯ ಗಂಡುಕಲೆ ‘ಯಕ್ಷಗಾನ’ವನ್ನು ದೇಶ ವಿದೇಶಗಳ ಉದ್ದಗಲಕ್ಕೂ ಪರಿಚಯಿಸಿದ ಕಾರಂತರು ಯಕ್ಷಗಾನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ವಿದೇಶಕ್ಕೆ ಕೊಂಡೊಯ್ದ ಕೀರ್ತಿ ಕಾರಂತರಿಗೆ ಸಲ್ಲುತ್ತದೆ. ಹಾಗೆಯೇ ದೇಶ- ವಿದೇಶಗಳಲ್ಲಿ ಪ್ರದರ್ಶನ ಮಾಡುತ್ತಿರುವ ಕಾರಂತರು ರಾಮಾಯಣದಿಂದ ಆಯ್ದುಕೊಂಡ ಕಥೆ ಜಟಾಯು ಮೋಕ್ಷದಂತ ಅನೇಕ ಪ್ರಸಂಗಗಳನ್ನು ಪ್ರಸ್ತುತ ಪಡಿಸುತ್ತಿದ್ದರು. ಕಾರಂತರ ಯಕ್ಷಗಾನದ ಜಟಾಯು ಸಿಮೆಂಟಿನಿಂದ ನಿರ್ಮಿಸಲಾಗಿದೆ. ಸುಂದರವಾದ ಜಟಾಯು ಮೂರ್ತಿ ಮನಸ್ಸಿಗೆ ಮುದ ನೀಡುವ ಆಕರ್ಷಕ ಮೈಕಟ್ಟು ಹಾಗೂ ಬಣ್ಣವನ್ನು ಹೊಂದಿದೆ. ಹಾಗೆಯೇ ಮುಂದುವರಿದರೆ, ನಿಮಗೆ ಕಾಣಸಿಗುವುದು ಗಾಡಿ ಕೂಸಣ್ಣನ ಕಲಾಕೃತಿ. ಇದನ್ನು ಪೈಬರ್ನಿಂದ ಮಾಡಲಾಗಿದೆ. ಈ ಕಲಾಕೃತಿಯನ್ನು ಬೆಂಗಳೂರಿನ ಹೆಸರಾಂತ ‘ಪ್ರತಿರೂಪಿ’ ಎಂಬ ಸಂಸ್ಥೆ ತಯಾರಿಸಿದೆ. ಜೋಡೆತ್ತು ಹಾಗೂ ಗಾಡಿ ಹಾಗೆಯೇ ಈ ಕಲಾಕೃತಿಯನ್ನು ಪರಿಚಯಿಸುತ್ತೇನೆ ಕೇಳಿ. ‘ಗಾಡಿ ಕೂಸಣ್ಣ’ ಎಂದರೆ ಈಗಿನ ಮಕ್ಕಳಿಗೆ ಪರಿಚಯ ಇರದು. 1970-90 ರ ದಶಕದಲ್ಲಿ ಕುಂದಾಪುರ – ಬ್ರಹ್ಮಾವರ ಪರಿಸರದಲ್ಲಿ ಜೋಡು ಎತ್ತಿನ ಗಾಡಿಯೆ ಸರಕು ಸಾಗಣೆಗೆ ಇರುವ ಸಾರಿಗೆ ವ್ಯವಸ್ಥೆ. ಹಾಗೆ ಕೂಸಣ್ಣ ಎಂಬವರು ಜೋಡೆತ್ತಿನ ಗಾಡಿಯಲ್ಲಿ ಕೋಟ ಪರಿಸರದಲ್ಲಿ ಮರಳು, ಕಲ್ಲು, ಮಣ್ಣು ಹಾಗೆ ಕುಂದಾಪುರ, ಬ್ರಹ್ಮಾವರ ಸಂತೆಗೆ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಹಾಗೂ ಸಂತೆಯ ಸರಕು ಸಾಮಾನುಗಳ ಸಾಗಾಟಕ್ಕೆ ಇವರ ಗಾಡಿಯೆ ಅಚ್ಚು-ಮೆಚ್ಚು. ಆಗಿನ ಕಾಲದಲ್ಲಿ ಜೋಡೆತ್ತಿನ ಗಾಡಿಗಳದೇ ಕಾರುಬಾರು ಜೋರಾಗಿಯೇ ಇತ್ತು. ಈಗ ಕಾಲ ಬದಲಾಗಿ ಮೋಟಾರು ವಾಹನಗಳ ಬರಾಟೆಯಲ್ಲಿ ಕಾಲನ ಹೊಡೆತಕ್ಕೆ ಸಿಲುಕಿ ಎತ್ತಿನ ಗಾಡಿಗಳು ಬಿಡಿ. ಪ್ರದರ್ಶನಕ್ಕೆ ಎಂದರೂ ಒಂದು ಗಾಡಿ ಸಿಗದು. ಹಾಗಾಗಿ ಮುಂದಿನ ಪೀಳಿಗೆಯ ಅರಿವಿಗಾಗಿ ಒಂದು ಸುಂದರವಾದ ಜೋಡೆತ್ತಿನ ಗಾಡಿಯನ್ನು ಥೀಂ ಪಾರ್ಕ್ ನಲ್ಲಿ ನಿಲ್ಲಿಸಲಾಗಿದೆ. ಹ್ಞಾ…. ಇನ್ನೂ ಒಳ ಆವರಣವನ್ನು ಪ್ರವೇಶ ದ್ವಾರದ ಎಡ ಬಲಗಳಲ್ಲಿ ತೆಂಕು-ಬಡಗಿನ 2 ಸುಂದರವಾದ ಯಕ್ಷಗಾನದ ಮೂರ್ತಿಗಳು ನಿಮ್ಮ ಚಿತ್ತ ಸೆಳೆಯುತ್ತದೆ. ಇದು ಸಿಮೆಂಟ್ ಕಲಾಕೃತಿಯಾಗಿದ್ದು, ಇದನ್ನು ಕನ್ನಡ- ಸಂಸ್ಕೃತಿ ಇಲಾಖೆಯ ಶಿಲ್ಪ ಕಲಾ ಅಕಾಡೆಮಿ ಕಲಾವಿದರು ರಚಿಸಿದ್ದಾರೆ. ಈ 2 ಶಿಲ್ಪಗಳು ತೆಂಕು ಬಡಗಿನ ಯಕ್ಷಗಾನದ 2 ತಿಟ್ಟುಗಳನ್ನು ಪ್ರತಿನಿಧಿಸುತ್ತವೆ. ಒಂದಕ್ಕಿಂತ ಒಂದು ಮೇಲೆ ಎನ್ನುವ ರೀತಿಯಲ್ಲಿ ಗಮನ ಸೆಳೆಯುತ್ತವೆ. ಕನ್ನಡ – ಸಂಸ್ಕೃತಿ ಇಲಾಖೆಯ ಶಿಲ್ಪಕಲಾ ಅಕಾಡೆಮಿಯ ಸದಸ್ಯರು ನಿರ್ಮಿಸಿರುವ ಎಲ್ಲಾ ಪ್ರತಿಕೃತಿಗಳು ಸುಂದರವಾಗಿ ಮೂಡಿ ಬಂದಿದೆ. ಜಟಾಯು ಯಕ್ಷಗಾನದ ಸ್ವಾಗತ ಗೊಂಬೆಗಳು, ಚೋಮ, ಮೂಕಜ್ಜಿಯ ಕನಸುಗಳು ಪುಸ್ತಕ, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಮೂರ್ತಿಗಳು 2 ಕಾರಂತರ ಮೂರ್ತಿಗಳು ಇಲ್ಲಿನ ಸೌಂದರ್ಯ ಹೆಚ್ಚಿಸಿದೆ. ಹಾಗೆಯೇ ಒಳ ಆವರಣಕ್ಕೆ ಪ್ರವೇಶ ಮಾಡುತ್ತಲೇ ಬಲಭಾಗದಲ್ಲಿ ವಿಶಾಲವಾದ ಹಚ್ಚ ಹಸಿರಿನ ಹುಲ್ಲು ಹಾಸು, ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಒಂದು ಸಣ್ಣ ಕಲ್ಲಿನಲ್ಲಿ ನಿರ್ಮಿತವಾದ ಮೀನಿನ ಕಾರಂಜಿ ಹಾಗೆ ಮುಂದಕ್ಕೆ ಮತ್ತೊಂದು ಕಲ್ಲಿನ ಕಲಾಕೃತಿ, ಕಾಬಾಳೆಗಿಡಗಳು ನಿಮ್ಮ ಮನ ಮುದಗೊಳಿಸದೆ ಇರಲಾರದು. ನಿಮ್ಮ ಕಿಸೆಯಲ್ಲಿ ಇರುವ ಮೊಬೈಲ್ ಸೆಲ್ಫಿ ತೆಗೆಯಲು ಕೈಗೆ ಬರದಿರಲಾರದು. ಇನ್ನು ಬಲಭಾಗದಲ್ಲಿ ಒಂದು ಕಲ್ಲಿನಿಂದ ಕಟ್ಟಿದ ಸಣ್ಣ ಕೆರೆ. ಅದರ ಮಧ್ಯಭಾಗದಲ್ಲಿ ಶಿವರಾಮ ಕಾರಂತರ ಐದು ಅಡಿ ಎತ್ತರದ ಕಂಚಿನ ಪ್ರತಿಮೆ. ಇದನ್ನು ನೋಡುತ್ತಲೇ ಕೈ ಎತ್ತಿ ಮುಗಿಯಬೇಕು ಎನ್ನುವ ಭಾವ ನಿಮ್ಮ ಮನದಲ್ಲಿ ಬಾರದಿರದು. ಅಂದ ಹಾಗೆ ಈ ಪ್ರತಿಮೆ ಹತ್ತಿರಕ್ಕೆ ಹೋಗಲು ಸಂಪರ್ಕಕ್ಕೆ ಒಂದು ಸಣ್ಣ ಸ್ಟೀಲ್ ಬ್ರಿಜ್ಡ್ ಇದೆ. ಹಾಗಂತ ನೀವು ಹತ್ತಿರಕ್ಕೆ ಹೋಗಲು ಅನುಮತಿ ಇಲ್ಲ, ಯಾಕೆಂದರೆ ನಿಮ್ಮ ಭದ್ರತೆಯ ಸಲುವಾಗಿ. ಚೆನ್ನಾಗಿದೆ ಕಾರಂತರ ಜೊತೆ ನಿಂತು ಒಂದು ಫೋಟೋ ತೆಗೆಯಬಹುದಿತ್ತು ಅನುಮತಿ ಇಲ್ಲವೆ? ಅಂತ ನಿಮ್ಮ ಮನದಲ್ಲಿ ಬೇಸರಿಸಬೇಕಾಗಿಲ್ಲ. ಅದಕ್ಕಾಗಿಯೇ ಕೆರೆಯ ಮೂಲೆಯಲ್ಲಿ ಮೂಡಿರುವ 4 ವಿಶ್ರಾಂತಿ ಮಂಟಪಗಳಲ್ಲಿ ಮೊದಲಿಗೆ ಸಿಗುವ ಮಂಟಪದಲ್ಲಿ ಕಾರಂತರು ಕುಳಿತ ಭಂಗಿಯಲ್ಲಿ ಫೈಬರ್ನಿಂದ ಮಾಡಿದ ಕಾರಂತರ ಪ್ರತಿರೂಪ ಇದೆ. ಅಲ್ಲಿ ನೀವು ಮನಸೋ ಇಚ್ಛೆ ನಿಮ್ಮ ಸೆಲ್ಫಿ ಫೋಟೋ ತೆಗೆಯಬಹುದು. ಇನ್ನೂ ಮುಂದಕ್ಕೆ ಬಂದು ಬಲಕ್ಕೆ ತಿರುಗಿ ಆಗ ನಿಮ್ಮ ಗಮನ ಸೆಳೆಯುವುದು ಸಿಮೆಂಟಿನಿಂದ ನಿರ್ಮಿತವಾದ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯ ಪುಸ್ತಕದ ಪ್ರತಿರೂಪ. ಮೂಕಜ್ಜಿಯ ಕನಸುಗಳು ಕಾದಂಬರಿ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕಾದಂಬರಿ. ಹಾಗಾಗಿಯೇ ಇದನ್ನು ನಿರ್ಮಿಸಲಾಗಿದೆ. ಈ ಕಾದಂಬರಿಯ ಮೂಲಕೃತಿಯ ಮುಖಪುಟದಲ್ಲಿ ಒಂದು ಅಜ್ಜಿಯ ರೇಖಾಚಿತ್ರವಿದೆ. ಆದರೆ ಇಲ್ಲಿ ಸ್ವಲ್ಪ ಮಾಪರ್ಾಡು ಮಾಡಲಾಗಿದೆ. ಅಜ್ಜಿಯ ರೇಖಾಚಿತ್ರದ ಬದಲಾಗಿ ಕಾರಂತರ ಮುಖದ ಉಬ್ಬು ಚಿತ್ರ ಬಿಡಿಸಲಾಗಿದೆ. ಇನ್ನು ಮೂಕಜ್ಜಿಯ ಕನಸುಗಳು ಎಂದು ಬರೆದಿರುವ ಉಬ್ಬು ಅಕ್ಷರದ ಮೇಲಿನಿಂದ ಸಣ್ಣ ನೀರಿನ ಜರಿ ಹರಿಯುತ್ತಿದ್ದು ಇದಕ್ಕೆ ಅಳವಡಿಸಿದ ಬಣ್ಣದ ಬೆಳಕು ಸಂಜೆಯ ನಂತರ ಇದರ ಸೌಂದರ್ಯ ನೂರ್ಮಡಿಗೊಳಿಸುತ್ತದೆ. ಅಲ್ಲಿಂದ ನೇರಕ್ಕೆ ಎಡಕ್ಕೆ ಬಂದರೆ ನಿಮ್ಮನ್ನು ಸ್ವಾಗತಿಸಲು ಚೋಮ ಡೊಳ್ಳು ಹಿಡಿದು ನಿಂತಿದ್ದಾನೆ. ಈ ಕಲಾಕೃತಿಯು ಸಿಮೆಂಟಿನಿಂದ ಮಾಡಿದ್ದು, ಇದು ಕಾರಂತರ ‘ಚೋಮನ ದುಡಿ’ ಕಾದಂಬರಿಯ ಕಥಾನಾಯಕ ಚೋಮನ ಪ್ರತಿರೂಪ. ಬಹಳ ಆಕರ್ಷಕವಾಗಿದ್ದು ಡೊಳ್ಳು ಹೊಡೆಯುತ್ತಿರುವ ಭಂಗಿಯಲ್ಲಿ ನಿರ್ಮಿಸಲಾಗಿದೆ. ಹಾ… ಈಗ ನಿಮಗೆ ಕಾರಂತ ಥೀಂ ಪಾರ್ಕ್ ನ ಹಲವು ಮಗ್ಗಲುಗಳ ಪರಿಚಯವಾಗಿದೆ. ಇನ್ನು ಕಲಾಭವನದ ಒಳಗೆ ಹೋಗೋಣ. ಕಲಾಭವನದ ನಾಲ್ಕೈದು ಮೆಟ್ಟಿಲು ಹತ್ತಿದರೆ ಒಂದು ವಿಶಾಲವಾದ ಹಜಾರ ಇದ್ದು ಮೆಟ್ಟಿಲನ್ನು ಹತ್ತುತ್ತಲೇ ನಿಮ್ಮ ಗಮನ ಫೈಬರ್ನಿಂದ ನಿರ್ಮಿತವಾದ ಒಂದು ಉಬ್ಬು ಶಿಲ್ಪ ಗಮನ ಸೆಳೆಯುತ್ತದೆ. ಅದುವೇ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕಲಾಕೃತಿ. ಈ ಕಲಾಕೃತಿಯ ರೇಖಾಚಿತ್ರವನ್ನು ರಚಿಸಿದವರು ಖ್ಯಾತ ರೇಖಾಚಿತ್ರಕಾರರಾದ ಕೆ.ಕೆ.ಹೆಬ್ಬಾರರು. ಇದರ ಉಬ್ಬು ಚಿತ್ರವನ್ನು ರಚಿಸಿದವರು ಉಡುಪಿಯ ನಿರ್ಮಿತಿ ಸಂಸ್ಥೆ. ಕೆ.ಕೆ ಹೆಬ್ಬಾರರು ಈ ಚಿತ್ರದಲ್ಲಿ ಸಮಗ್ರ ಕಾರಂತರನ್ನು ಒಂದು ಚಿತ್ರದಲ್ಲಿ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಈ ಚಿತ್ರವನ್ನು ರಚಿಸಿದ ಕೆ.ಕೆ.ಹೆಬ್ಬಾರರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಈ ಚಿತ್ರಕ್ಕೆ ಕಾರಂತರು ರಚಿಸಿದ ಶ್ರೇಷ್ಠ ಕಾದಂಬರಿಯಾದ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂಬ ಹೆಸರನ್ನು ಇಡಲಾಗಿದೆ. ಇನ್ನು ಈ ಚಿತ್ರದ ವಿವರವನ್ನು ನಿಮಗೆ ತಿಳಿಸಬೇಕಾಗಿದೆ. ಈ ಚಿತ್ರ 4 ಮುಖಗಳು, 5 ಕೈಗಳು, 2 ಕಾಲುಗಳನ್ನು ಹೊಂದಿದೆ. ಎರಡು ಕಾಲುಗಳಲ್ಲಿ ಗೆಜ್ಜೆಗಳು ಇವರೊಬ್ಬ ಶ್ರೇಷ್ಠ ಯಕ್ಷಗಾನ ಕಲಾವಿದ ಮತ್ತು ಯಕ್ಷಗಾನ ಗುರು ಎಂಬುದನ್ನು ಸಾರುತ್ತದೆ. ಬಲಗಡೆ ಒಂದು ಕೈ ಇದ್ದು ಕೈಯಲ್ಲಿ ಒಂದು ಗರಿ(ಲೇಖನಿ)ಯನ್ನು ಹಿಡಿಯಲಾಗಿದೆ. ಇದು ಕಾರಂತರು ಇಬ್ಬ ಒಳ್ಳೆಯ ಲೇಖಕ ಎನ್ನುವುದನ್ನು ಗುರುತಿಸುತ್ತದೆ. ಎಡಗಡೆಯಲ್ಲಿ ನಾಲ್ಕು ಕೈಗಳಿದ್ದು ಒಂದು ಕೈಯನ್ನು ಮೇಲಕ್ಕೆ ಎತ್ತಿ ಹಿಡಿಯಲಾಗಿದ್ದು, ಕೈ ಜೊತೆಗೆ ಸೂರ್ಯ ಚಂದ್ರರ ಚಿತ್ರವನ್ನು ನಿರ್ಮಿಸಲಾಗಿದೆ. ಇದು ಕಾರಂತರು ಹುಟ್ಟು ಹೋರಾಟಗಾರ ಹಾಗೂ ಬಂಡಾಯದ ಗುರುತಾಗಿದೆ. ಹುಟ್ಟಿನಿಂದ ಅಂತ್ಯದವರೆಗೆ ಕಾರಂತರು ಸ್ವಾಭಿಮಾನಿಯಾಗಿ ತನ್ನತನದೊಂದಿಗೆ ಯಾವತ್ತು ರಾಜಿಯಾಗದಿರುವುದರ ಗುರುತ್ತಾಗಿ ಸೂರ್ಯ ಚಂದ್ರರ ಕುರುಹು ತೋರಿಸಲಾಗಿದೆ. ಹಾಗೆ ಕಾರಂತರ ಕೀರ್ತಿ ಸೂರ್ಯ ಚಂದ್ರರು ಇರುವಲ್ಲಿಯವರೆಗೆ ಅಜರಾಮರವಾಗಿದೆ. ಎನ್ನುವುದನ್ನು ಸಾರುತ್ತದೆ. ಹಾಗೆ 2, 3, 4 ನೇ ಕೈಗಳಲ್ಲಿ ಪುಸ್ತಕಗಳನ್ನು ಕೊಡಲಾಗಿದೆ. ಈ ಪುಸ್ತಕಗಳು ಕಾರಂತರು ಒಬ್ಬ ಒಳ್ಳೆಯ ಕಾದಂಬರಿಕಾರ, ಕಥೆಗಾರ, ನಾಟಕ ರಚನಾಕಾರ ಎಂಬುದನ್ನು ಸೂಚಿಸುತ್ತದೆ. ಇನ್ನು ಎದೆಯ ಮೇಲೆ ಹಬ್ಬಿರುವ ಒಂದು ಬಳ್ಳಿ ಇದನ್ನು ಕೆಲವರು ತಪ್ಪಾಗಿ ತಿಳಿದು ಜನಿವಾರ ಎಂದು ಹೇಳುತ್ತಾರೆ. ಇದು ಸರಿಯಲ್ಲ. ಇದು ಹಸಿರಿನ ಸಂಕೇತ ಇದು ಅವರೊಬ್ಬ ಪರಿಸರವಾದಿ ಎಂಬುದನ್ನು ಸೂಚಿಸುತ್ತದೆ. ಕಾರಂತರು ರಚಿಸಿದ ಅನೇಕ ಕೃತಿಗಳು ಪರಿಸರದೊಂದಿಗೆ ಬೆರೆತಿವೆ. ಗಿಡ, ಮರ, ಬಳ್ಳಿ, ಗುಡ್ಡ ಕಾಡುಗಳು ಇಲ್ಲದೆ ಕಾರಂತರ ಕೃತಿಗಳು ಪೂರ್ಣವಾಗದು. ಹಾಗೆ ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ಧುಮುಕಿದ್ದರು ಕಾರಂತರು. ಪರಿಸರದ ಮೇಲಿನ ಪ್ರೀತಿಯ ಸಂಕೇತವನ್ನು ಸೂಚಿಸುತ್ತದೆ. ಇನ್ನು ಎರಡು ಕಾಲುಗಳ ಹಿಂಬದಿಯಲ್ಲಿ ಕಡಲನ್ನು ರಚಿಸಲಾಗಿದೆ. ಇದು ಕಾರಂತರು ಕಡಲ ತಡಿಯ ಭಾರ್ಗವ ಎಂಬುದನ್ನು ಸೂಚಿಸುತ್ತದೆ.
ಅಂದ ಹಾಗೆ ಈ ಉಬ್ಬು ಚಿತ್ರದ ಬೆಳ್ಳಿಯ ಫಲಕವನ್ನು ಕಾರಂತ ಹುಟ್ಟೂರ ಪ್ರಶಸ್ತಿ ವಿಜೇತರಿಗೆ ನೀಡಲಾಗಿದೆ. ಇಲ್ಲಿರುವ ಎಲ್ಲಾ ಕೋಣೆಗಳಿಗೆ ಕಾರಂತರ ಕಾದಂಬರಿಯ ಹೆಸರು ಇಡಲಾಗಿದೆ. ವಿಶಾಲವಾದ ಹಜಾರದ ಎಡಭಾಗದಲ್ಲಿ ಒಂದು ಕಿರು ಸಭಾಂಗಣವಿದ್ದು ಇದಕ್ಕೆ ಚೋಮನ ದುಡಿ ಎಂದು ಹೆಸರಿಡಲಾಗಿದೆ. ಇಲ್ಲಿ ಸಣ್ಣ ಮಕ್ಕಳ ಬೇಸಿಗೆ ಶಿಬಿರಗಳು, ಮಕ್ಕಳಿಗೆ ಯಕ್ಷಗಾನ ತರಬೇತಿ ಹಾಗೂ ಇಲ್ಲಿ ಸಣ್ಣ ಪ್ರೊಜೆಕ್ಟರ್ ಇದ್ದು ಇದರಲ್ಲಿ ಡಾ| ಶಿವರಾಮ ಕಾರಂತರ ಸಾಕ್ಷ್ಯ ಚಿತ್ರಗಳನ್ನು ಬರುವ ಪ್ರವಾಸಿಗರಿಗೆ ತೋರಿಸಲಾಗುತ್ತದೆ. ಅಲ್ಲೇ ಪಕ್ಕದಲ್ಲಿ ಅಂಗನವಾಡಿ ಕೇಂದ್ರವಿದ್ದು, ಇದಕ್ಕೆ ಚಿಣ್ಣರ ಅಂಗಳ ‘ಕುಡಿಯರ ಕೂಸು’ ಎಂಬುದಾಗಿ ನಾಮಕರಣ ಮಾಡಲಾಗಿದ್ದು, ಅಂಗನವಾಡಿಯ ಗೋಡೆಗಳಲ್ಲಿ ಕಾಟರ್ೂನ್ ಚಿತ್ರಗಳನ್ನು ಬಿಡಿಸಲಾಗಿದ್ದು, ಮಕ್ಕಳ ಮನ ಮುದಗೊಳಿಸುತ್ತದೆ. ಸುಮಾರು 1000 ಜನಸಂಖ್ಯೆಯನ್ನು ಹೊಂದಿದ್ದು 75 ಸಂಖ್ಯೆಯಲ್ಲಿ ಪೂರಕ ಪೌಷ್ಠಿಕ ಆಹಾರದ ಫಲಾನುಭವಿಗಳನ್ನು ಹೊಂದಿದ್ದು, 25ಕ್ಕೂ ಹೆಚ್ಚು ಪುಟಾಣಿಗಳು ಇಲ್ಲಿ ಶಾಲಾ ಪೂರ್ವ ಶಿಕ್ಷಣದ ಸಂಪೂರ್ಣ ಸೌಲಭ್ಯ ಪಡೆಯುತ್ತಿದ್ದಾರೆ. ಇಲ್ಲಿ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಪ್ರತ್ಯೇಕ ಅಡುಗೆ ಕೋಣೆಯನ್ನು ಹೊಂದಿದೆ. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಂಗನವಾಡಿ ಕೇಂದ್ರವು ಸುಂದರವಾಗಿ ಮೂಡಿ ಬಂದಿದ್ದು, ಸ್ಥಳೀಯ ಪಂಚಾಯತ್ನ ನೆರವಿನೊಂದಿಗೆ ಮಾದರಿ ಅಂಗನವಾಡಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಅಲ್ಲದೆ 5 ಸ್ತ್ರೀ ಶಕ್ತಿ ಸಂಘಗಳನ್ನು ಹೊಂದಿದ್ದು ಸರಿ ಸುಮಾರು 100 ಮಹಿಳೆಯರನ್ನು ಆಥರ್ಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲರನ್ನಾಗಿಸುತ್ತಿದೆ. ಹಾಗೆಯೇ ಬಲಭಾಗದಲ್ಲಿ ಕಾಯರ್ಾಲಯ ‘ಆಟರ್್ ಗ್ಯಾಲರಿ’ ಇದ್ದು ಇಲ್ಲಿ ಕಾರಂತರ ಅಮೂಲ್ಯವಾದ ಕಪ್ಪು ಬಿಳುಪಿನ ಫೋಟೋಗಳು ಹಾಗೂ ಅವರ ಪತ್ನಿ ಲೀಲಾ ಕಾರಂತ ಹಾಗೂ ಮಕ್ಕಳ ಜೊತೆಗಿನ ಫೋಟೋಗಳು ಮತ್ತು ಅನೇಕ ಖ್ಯಾತ ಚಿತ್ರಕಾರರು ಕಾರಂತರು ಮತ್ತು ಕಾರಂತರ ವಿಷಯಾಧಾರಿತ ಚಿತ್ರಗಳನ್ನು ಬರೆದಿರುವ ಅನೇಕ ಚಿತ್ರಗಳನ್ನು ಬಿಡಿಸಿದ್ದಾರೆ ಮತ್ತು ಬ್ರಹ್ಮಾವರ ಫೋಟೋಗ್ರಾಫಿಕ್ ಅಸೋಸಿಯೇಶನ್ರವರ ಕೆಲವೊಂದು ಅಪರೂಪದ ಫೋಟೋಗಳು ಗೋಡೆಗಳಲ್ಲಿ ರಾರಾಜಿಸುತ್ತಿದೆ. ಮತ್ತು ಇದುವರೆಗೆ ಕಾರಂತ ಹುಟ್ಟೂರು ಪ್ರಶಸ್ತಿಗಳನ್ನು ಪಡೆದ ಮಹಾನುಭಾವರ ಫೋಟೋಗಳು ಇವೆ. ಕನ್ನಡದ 8 ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳು ನಿಮ್ಮನ್ನು ಆಶೀರ್ವದಿಸಲು ಕಾದು ನಿಂತಿದ್ದಾರೆ. ಕಾರಂತರು ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ, ವಿ.ಕೃ.ಗೋಕಾಕ್, ಯು.ಆರ್. ಅನಂತಮೂರ್ತಿ , ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಹೀಗೆ 8 ಜ್ಞಾನಪೀಠ ವಿಜೇತರ ಮೂತರ್ಿಗಳನ್ನು ಪ್ರತಿಸ್ಥಾಪಿಸಲಾಗಿದೆ. ಎಲ್ಲರೂ ಒಂದಕ್ಕಿಂತ ಒಂದು ಮಿಗಿಲಾದ ರೂಪ ಹೊಂದಿದೆ. ಹಾಗೂ ಕಾರಂತರು ಕ್ಯಾಮರ ಹಿಡಿದು ಕುಳಿತಿರುವ ಭಂಗಿಯಲ್ಲಿನ ಕಲಾಕೃತಿ ಮತ್ತು ಮಕ್ಕಳಿಗೆ ಕಥೆ ಹೇಳುತ್ತಿರುವ ಮೂತರ್ಿ ಗಮನ ಸೆಳೆಯುತ್ತವೆ. ಇಲ್ಲಿಯೇ ಪಕ್ಕದಲ್ಲಿ ರಂಗ ಮಂದಿರ. ಇದಕ್ಕೆ ‘ಮೂಕಜ್ಜಿಯ ಕನಸುಗಳು’ ಎಂದು ಹೆಸರಿಸಲಾಗಿದೆ. ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ವಾರ್ಷಿಕ ಕಾರಂತ ಹುಟ್ಟೂರು ಪ್ರಶಸ್ತಿಯನ್ನು ಇದೇ ರಂಗ ಮಂದಿರದಲ್ಲಿ ನೀಡಲಾಗುತ್ತಿದೆ. ಸುಮಾರು 600ಕ್ಕೂ ಹೆಚ್ಚು ಜನರು ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಬಹುದು. ಆದರೆ ಇಲ್ಲಿಯ ವೇದಿಕೆಯಲ್ಲಿ ಒಂದು ವಿಶೇಷವಿದೆ. ಎಲ್ಲಾ ಕಡೆಯಲ್ಲಿ ಕಲಾವಿದರು ಎತ್ತರದ ವೇದಿಕೆಯಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ಮಾಡುತ್ತಾರೆ. ಆದರೆ ಇಲ್ಲಿ ಪ್ರೇಕ್ಷಕ ಮಹಾಶಯರು ಎತ್ತರದಲ್ಲಿ ಇರುತ್ತಾರೆ. ಇಲ್ಲಿ ವಿದ್ಯುತ್ ಹೋದರೂ ಜನರೇಟರ್ನ ವ್ಯವಸ್ಥೆ ಇದ್ದು ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಸನ್ನದ್ಧವಾಗಿ ನಿಂತಿದೆ. ಅಂದ ಹಾಗೆ ಸೌರಶಕ್ತಿಯ ಸಮರ್ಪಕ ಬಳಕೆ ಮಾಡಿಕೊಳ್ಳುತ್ತಿದ್ದು ವಿದ್ಯುತ್ಗೆ ಪರ್ಯಾಯ ಮಾರ್ಗೋಪಾಯವನ್ನು ಕೂಡ ಕಂಡುಕೊಂಡಿದೆ. ಇನ್ನು ಮೇಲಿನ ಅಂತಸ್ತಿಗೆ ಹೋಗೋಣ. ದೊಡ್ಡ ಹೆಬ್ಬಾಗಿಲು ದಾಟಿ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬರುತ್ತಿದ್ದಂತೆಯೆ ಕಾರಂತರ ಕೃತಿ ಪ್ರಪಂಚ ನಿಮ್ಮ ಎದುರಿಗೆ ನಿಲ್ಲುತ್ತದೆ. ಕಾರಂತರು ಯಾವ ಯಾವ ಇಸವಿಯಲ್ಲಿ ಯಾವ ಯಾವ ಕಾದಂಬರಿ, ಕೃತಿ ರಚಿಸಿದರು ಎಂಬ ವಿವರಣೆಗಳುಳ್ಳ ಕೃತಿ ಪ್ರಪಂಚ ಸಿಗುತ್ತದೆ. ಹಾಗೆಯೇ ಮೆಟ್ಟಿಲು ಹತ್ತಿ ಮೇಲೆ ಬನ್ನಿ, ಇಲ್ಲಿ ನಿಮಗೆ ಗಾಂಧಿಯ ಒಂದು ಚಿಕ್ಕ ಪ್ರತಿಮೆ ಇದ್ದು, ಇದು ಬೆಂಗಳೂರಿನ ವಿಧಾನ ಸೌಧ ಮತ್ತು ವಿಕಾಸ ಸೌಧದ ನಡುವೆ ಇರುವ 80 ಅಡಿ ಎತ್ತರದ ಗಾಂಧಿ ಪ್ರತಿಮೆಯ ಪ್ರತಿರೂಪವಾಗಿದೆ. ಇಲ್ಲಿ ಪಕ್ಕದಲ್ಲಿ ಗ್ರಂಥಾಲಯ ಇದ್ದು ಇದಕ್ಕೆ ‘ಚಿಗುರಿದ ಕನಸು’ ಎಂಬ ಕಾದಂಬರಿಯ ಹೆಸರನ್ನು ಇಡಲಾಗಿದ್ದು, ಇದು ಗ್ರಾಮ ಪಂಚಾಯತ್ ಗ್ರಂಥಾಲಯವಾಗಿದ್ದು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ನಾಡಿನ ಖ್ಯಾತ ಸಾಹಿತಿಗಳ ಕಾದಂಬರಿ, ಕಥೆ, ನಾಟಕ, ಸಾಹಿತ್ಯ, ಗ್ರಂಥಾಲಯ ವಿಜ್ಞಾನ, ಭೌತಶಾಸ್ತ್ರ, ಇಂಜಿನಿಯರಿಂಗ್, ರಸಾಯನಶಾಸ್ತ್ರ, ತಂತ್ರಜ್ಞಾನ, ಜೀವಶಾಸ್ತ್ರ, ಖನಿಜಶಾಸ್ತ್ರ, ಸಸ್ಯಶಾಸ್ತ್ರ, ಕೃಷಿವಿಜ್ಞಾನ, ಪ್ರಾಣಿವಿಜ್ಞಾನ, ವೈದ್ಯಕೀಯ, ಉಪಯುಕ್ತ ಕಲೆ, ಯಕ್ಷಗಾನ, ಆಧ್ಯಾತ್ಮಿಕ, ಲಲಿತಕಲೆ, ಸಾಹಿತ್ಯ, ಸಣ್ಣಕಥೆ, ಕವನ, ಪ್ರವಾಸಕಥನ, ಭಾಷಾಶಾಸ್ತ್ರ, ಧರ್ಮಶಾಸ್ತ್ರ, ತತ್ತ್ವಶಾಸ್ತ್ರ, ಮನಶಾಸ್ತ್ರ, ಶಿಕ್ಷಣ, ಭೂಗೋಳಶಾಸ್ತ್ರ, ಇತಿಹಾಸ, ರಾಜಕೀಯ,ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಕಾನೂನು, ನಿಘಂಟುಗಳು, ವಚನಗಳು, ರಸಪ್ರಶ್ನೆ, ಮಹಾಭಾರತ, ರಾಮಾಯಣ, ಭಗವದ್ಗೀತೆ, ಯೋಗಗಳು, ಪ್ರಬಂಧ ಮತ್ತು ಭಾಷಣಗಳು, ಮಕ್ಕಳ ಕಥೆಗಳು, ಗಾದೆ ಮತ್ತು ಒಗಟು, ಜೀವನ ಚರಿತ್ರೆ, ನಗೆಹೊನಲು, ಜ್ಞಾನಪೀಠ ಪ್ರಶಸ್ತಿ ವಿಜೇತರ ಕೃತಿಗಳು ಹಾಗೂ ಇತರ ಹೆಸರಾಂತ ಸಾಹಿತಿಗಳ ಕೃತಿಗಳು ಸೇರಿದಂತೆ ಸುಮಾರು 11,000 ಕ್ಕೂ ಮಿಕ್ಕಿ ಅಮೂಲ್ಯ ಪುಸ್ತಕ ಭಂಡಾರವನ್ನು ಹೊಂದಿದೆ. ಅಲ್ಲದೆ ಇಲ್ಲಿರುವ ಪುಸ್ತಕವನ್ನು ಜೋಡಿಸಿಟ್ಟ ಪರಿ ಅತ್ಯಂತ ವ್ಯವಸ್ಥಿತವಾಗಿದೆ. ರಾಜ್ಯ ಗ್ರಾಮ ಪಂಚಾಯತ್ ವ್ಯವಸ್ಥೆಯ ಗ್ರಂಥಾಲಯಗಳಲ್ಲಿಯೇ 2ನೇ ಸ್ಥಾನದಲ್ಲಿ ಈ ಗ್ರಂಥಾಲಯ ಎನ್ನುವುದು ಹೆಮ್ಮೆಯ ವಿಚಾರ. ಇಲ್ಲಿ ಬರುವ ಜ್ಞಾನಾರ್ಥಗಳ ಜ್ಞಾನದಾಹವನ್ನು ನೀಗುತ್ತಿದೆ. ಇಷ್ಟೆ ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಈ-ಗ್ರಂಥಾಲಯ’ ವನ್ನು ಹೊಂದಿದ್ದು, ಆಧುನಿಕ ಜಗತ್ತಿನ ಓಟಕ್ಕೆ ಸರಿಸಮನಾದ ಸ್ಪರ್ಧೆ ನೀಡುವಲ್ಲಿ ಇಲ್ಲಿನ ಗ್ರಂಥಾಲಯ ಶಕ್ತವಾಗಿದೆ ಎನ್ನುವುದು ಹೆಮ್ಮೆಯ ವಿಚಾರ. ಎಲ್ಲ ಮಗ್ಗಲುಗಳನ್ನು ನೋಡಿದ ನೀವು ಮೇಲಂತಸ್ತಿನಿಂದ ಹೊರಗಿನ ಆವರಣವನ್ನು ನೋಡಿ. ನಿಶ್ಯಬ್ಧ ಪ್ರಕೃತಿ ಮಡಿಲಲ್ಲಿ ಸುಂದರವಾದ ಕಾರಂತ ಥೀಂ ಪಾರ್ಕ್ ಹೊರಾಂಗಣದ ಸೌಂದರ್ಯವನ್ನು ಸವಿಯಲು ಹಿತವೆನಿಸುತ್ತದೆ. ವಿಶಾಲವಾದ ಹುಲ್ಲುಹಾಸು, ಕೆರೆ, ಕಾರಂತರ ಕಂಚಿನ ಮೂತರ್ಿ, ಕೆರೆ ಸುತ್ತಲಿನ ವಿಶ್ರಾಂತಿ ಮಂಟಪ ಎಲ್ಲವು ಸೋಜಿಗವಾಗಿ ಕಾಣುತ್ತದೆ. ಮನಸ್ಸು ತುಂಬಿ ಬರುತ್ತದೆ. ಕಾರಂತರಿಗೆ ಹುಟ್ಟೂರಿನ ಈ ಸ್ಮಾರಕ ಅವರ ಗೌರವ ಸೂಚಕವಾಗಿ ಬೆಳೆದು ನಿಂತಿದೆ. ಕಾರಂತ ಹುಟ್ಟೂರ ಪ್ರಶಸ್ತಿ ಕಾರಂತರ ಆಸಕ್ತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಪ್ರತಿವರ್ಷ ‘ಕಾರಂತ ಹುಟ್ಟೂರ ಪ್ರಶಸ್ತಿ’ಯನ್ನು ನೀಡಲಾಗುತ್ತದೆ. ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಜಂಟಿಯಾಗಿ ಈ ಪ್ರಶಸ್ತಿಯನ್ನು ಕೊಡಮಾಡುತ್ತದೆ. ಕೋಟದ ಸಮಸ್ತ ಜನತೆಯ ಎದುರಿನಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಗೌರವ ಪೂರ್ವಕವಾಗಿ ಬಹಳ ವಿಜೃಂಭಣೆಯಿಂದ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರ ವಿವರ 2005 – ವೀರಪ್ಪ ಮೊಯ್ಲಿ 2006 – ವೆಂಕಟಾಚಲ 2007 – ಪ್ರೊ. ಕೆ. ಆರ್. ಹಂದೆ 2008 – ರವಿ ಬೆಳಗೆರೆ 2009 – ಚಿಟ್ಟಾಣಿ ರಾಮಚಂದ್ರ ಹೆಗಡೆ 2010 – ಗಿರೀಶ್ ಕಾಸರವಳ್ಳಿ 2011 – ಸಾಲು ಮರದ ತಿಮ್ಮಕ್ಕ 2012 – ಜಯಶ್ರೀ 2013 – ಮೋಹನ ಆಳ್ವ 2014 – ಜಯಂತ್ ಕಾಯ್ಕಿಣಿ 2015 – ಸದಾನಂದ ಸುವರ್ಣ 2016 – ಡಾ| ಬಿ. ಎಂ. ಹೆಗ್ಡೆ 2017 – ಪ್ರಕಾಶ ರೈ 2018-ಶ್ರೀ ಪಡ್ರೆ
2019-ಶ್ರೀಮತಿ ಕವಿತಾ ಮಿಶ್ರ
ಓದುಗರೇ, ಕಾರಂತ ಥೀಂ ಪಾರ್ಕ್ ನ ಒಳಹೊರವನ್ನು ತಿಳಿದುಕೊಂಡ ನೀವು ಕೋಟ ಡಾ| ಶಿವರಾಮ ಕಾರಂತರ ಬಗ್ಗೆ ತಿಳಿಯಲೇ ಬೇಕು. ಕೋಟ ಶಿವರಾಮ ಕಾರಂತರ ಜನ್ಮ ಭೂಮಿ ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಪುಟ್ಟ ಗ್ರಾಮ 1902 ಅಕ್ಟೋಬರ್ 10 ರಂದು ಬ್ರಾಹ್ಮಣ ಕುಟುಂಬದಲ್ಲಿ ಶೇಷಕಾರಂತ ಮತ್ತು ಲಕ್ಷ್ಮೀ ಕಾರಂತ ದಂಪತಿಯ ನಾಲ್ಕನೇ ಪುತ್ರರಾಗಿ ಜನಿಸಿದವರು ಕೋಟ ಶಿವರಾಮ ಕಾರಂತರು. ಯಕ್ಷಗಾನ ಪ್ರಸಂಗ ರಚನೆಕಾರರಾಗಿದ್ದು ಮಳಲಿ ಸುಬ್ಬರಾಯರ ಗರಡಿಯಲ್ಲಿ ಯಕ್ಷಗಾನದ ಒಳ- ಹೊರ ತಿರುಳುಗಳನ್ನು ಕಲಿತ ಕಾರಂತರು ಯಕ್ಷಗಾನವನ್ನು ರಾಜ್ಯ ಅಷ್ಟೇ ಅಲ್ಲದೆ ದೇಶ -ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಹರಡಿದರು. ಯಕ್ಷಗಾನದ ಹಿಮ್ಮೇಳದಲ್ಲಿ ಹೊಸ ಹೊಸ ಸಂಗೀತ ವಾದ್ಯಗಳ ಪರಿಕರಗಳನ್ನು ಅಳವಡಿಸಿ ತನ್ನದೇ ಆದ ವಿಶಿಷ್ಠ ಛಾಪನ್ನು ಮೂಡಿಸಿದರು. ಕರಾವಳಿ ಮತ್ತು ಮಲೆನಾಡಿನಾದ್ಯಂತ ಓಡಾಡಿ ‘ತಾಳೆ ಓಲೆ’ಗಳನ್ನು ಸಂಗ್ರಹಿಸಿ ‘ಯಕ್ಷಗಾನ ಬಯಲಾಟ’ ಎಂಬ ಮಹತ್ತರವಾದ ಗ್ರಂಥಗಳನ್ನು ರಚಿಸಿದರು. ಇದಕ್ಕೆ ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ಬಂದಿರುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾಗಿದ್ದ ಕಾರಂತರು ಸಾಹಿತ್ಯದ ಕರ್ಮಭೂಮಿಯನ್ನಾಗಿ ಪುತ್ತೂರನ್ನು ಆಯ್ಕೆ ಮಾಡಿಕೊಂಡರು. ಇವರು ಪುತ್ತೂರಿನಲ್ಲಿ ‘ಬಾಲವನ’ವನ್ನು ಸ್ಥಾಪನೆ ಮಾಡಿದರು. ಅಲ್ಲಿಂದಲೇ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದ ಕಾರಂತರನ್ನು ಅನೇಕ ಗೌರವ ಪ್ರಶಸ್ತಿಗಳು ಅರಸಿಕೊಂಡು ಬಂದವು. ‘ಕಡಲ ತಡಿಯ ಭಾರ್ಗವ’, ‘ನಡೆದಾಡುವ ವಿಶ್ವಕೋಶ’, ‘ಸೋಲಿಗೆ ಹೆದರದ ಜಾಯಮಾನ’, ‘ಕ್ರಿಯಾಶೀಲ ಚಿಂತಕ’, ‘ಶತಮಾನ ಕಂಡ ಸಾಹಿತಿ’, ಎಂದೆಲ್ಲ ಕರೆಸಿಕೊಳ್ಳುವ ಕಾರಂತರಿಗೆ 1978 ರಲ್ಲಿ ರಮಾಬಾಯಿ ಜೈನ್ ಎಂಬ ಮಹಿಳೆ ಸ್ಥಾಪಿಸಿದ ‘ಜ್ಞಾನಪೀಠ ಪ್ರಶಸ್ತಿ’ಯನ್ನು ಕಾರಂತರು 1960ರಲ್ಲಿ ರಚಿಸಿದ ‘ಮೂಕಜ್ಜಿಯ ಕನಸುಗಳು’ ಎಂಬ ಕಾದಂಬರಿಗೆ ನೀಡಲಾಗಿದೆ. 1990 ರಲ್ಲಿ ‘ಪಂಪ ಪ್ರಶಸ್ತಿ’ಯನ್ನು ಕಾರಂತರು 1970 ರಲ್ಲಿ ರಚಿಸಿದ ‘ಮೈಮನಗಳ ಸುಳಿಯಲ್ಲಿ’ ಎಂಬ ಕಾದಂಬರಿಗೆ ನೀಡಲಾಗಿದೆ. 1954 ರಲ್ಲಿ ಮೈಸೂರಿನಲ್ಲಿ ನಡೆದ 57 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 1923 ರಲ್ಲಿ ‘ವಸಂತ ಪತ್ರಿಕೆ’ಯನ್ನು ಸ್ಥಾಪಿಸಿ ಪತ್ರಿಕೋದ್ಯಮದಲ್ಲಿ ತನ್ನ ಛಾಪನ್ನು ಮೂಡಿಸಿದರು ಹಾಗೂ ಕಾರಂತರು ಸ್ಥಾಪಿಸಿದ ಇನ್ನೊಂದು ಪತ್ರಿಕೆ ‘ವಿಚಾರವಾಣಿ’. 1952 ರಲ್ಲಿ ‘ಕಿಸಾನ್ ಮಂಜ್ದೂರ್’ ಪಕ್ಷದಿಂದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುತ್ತಾರೆ. ಸೋಲಿಗೆ ಹೆದರದ ಕಾರಂತರು 1989 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾ ಅಣುವಿದ್ಯುತ್ ಸ್ಥಾವರದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಅದನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಸಂಸತ್ ಸ್ಥಾನಕ್ಕೆ ಸ್ಪರ್ಧಿ ಸುತ್ತಾರೆ. ಅನೇಕ ವಿಶ್ವ ವಿದ್ಯಾಲಯಗಳಿಂದ ‘ಗೌರವ ಡಾಕ್ಟರೇಟ್’ (ಡಿ.ಲಿಟ್) ಪದವಿಗಳು ಇವರನ್ನರಸಿ ಬಂದಿದೆ. 1997 ರಲ್ಲಿ ಹಂಪಿ ವಿಶ್ವ ವಿದ್ಯಾನಿಲಯ ಇವರಿಗೆ ‘ನಾಡೋಜ ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದೆ. ಕಾರಂತರು ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೇ ಸಿನಿಮಾ ಕ್ಷೇತ್ರದಲ್ಲಿಯೂ ಕೈಯಾಡಿಸಿದ್ದಾರೆ. ಚಲನ ಚಿತ್ರ ನಿರ್ಮಾಪಕರಾಗಿ ದುಡಿದ ಕಾರಂತರು ಮೂಕ ಚಲನ ಚಿತ್ರಗಳನ್ನು ನಿರ್ಮಿಸಿದರು. ಇವರು ನಿರ್ಮಿಸಿದ ‘ಚೋಮನ ದುಡಿ’ ಚಲನ ಚಿತ್ರಕ್ಕೆ ರಾಷ್ಟ್ರ ಮಟ್ಟದ ಅತ್ಯುತ್ತಮ ಕಥಾ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಭಾಷಣಾ ಪ್ರಶಸ್ತಿಗಳು ಲಭಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಹುಲುಸಾದ ಕೃಷಿ ಬೆಳದ ಕಾರಂತರು 47 ಕಾದಂಬರಿಗಳು, 31 ನಾಟಕ ಗ್ರಂಥಗಳು, 6 ಹರಟೆ ವಿಡಂಬನೆಗಳು. 10 ಬಾಲಸಾಹಿತ್ಯಗಳು, 13 ಕ್ಕೂ ಹೆಚ್ಚು ಸೃಜನೇತರ ಕೃತಿಗಳು, ಐಬಿಹೆಚ್ ಪ್ರಕಾಶನ ಬೆಂಗಳೂರು ಇವರ ‘ಅಮರ ಚಿತ್ರಕಥೆ’ ಮಾಲೆಯ ಸುಮಾರು 85ಕ್ಕೂ ಹೆಚ್ಚು ಕನ್ನಡ ಅನುವಾದ ಮಾಡಿದರು. ಹಾಗೂ ಚತುರಂಗ ಕಥೆ ಕನ್ನಡ ಅನುವಾದ 46ಕ್ಕೂ ಹೆಚ್ಚು ಮತ್ತು ‘ಇಕೊ’ ಪುಸ್ತಕ ಮಾಲೆಯ ಅನುವಾದ 14, ಕಾರಂತರ ಸಂಪಾದಕತ್ವದ ಇಕೊ ಪುಸ್ತಕಗಳು 43ಕ್ಕೂ ಹೆಚ್ಚು ವಯಸ್ಕರ ಶಿಕ್ಷಣ ಕೃತಿಗಳು8, ವಿಜ್ಞಾನ ಅದ್ಭುತ ಜಗತ್ತು 8, ಕಲಾ ಪ್ರಬಂಧ 11, ಪ್ರವಾಸ ಕಥನ 6, ಜೀವನ ಚರಿತ್ರೆ ಮತ್ತು ಆತ್ಮಕಥನ 9, ಸಹಾಯಕ ಸಾಹಿತ್ಯ ನಿಘಂಟು ‘ಸಿರಿಗನ್ನಡ ಅರ್ಥಕೋಶ’ ವಿಶ್ವಕೋಶ 8, ಬಿಡಿ ಬರಹಗಳು, (ಸಂಪುಟಗಳಲ್ಲಿ 8) ಸಂಪಾದಿತ ಕೃತಿಗಳು 3, ಪತ್ರಿಕೆಗಳು 2 ವಸಂತಕನ್ನಡ ಪತ್ರಿಕೆ ಮತ್ತು ವಿಚಾರವಾಣಿ ಅನುವಾದಗಳು ಸಾಹಿತ್ಯಕ 3, ಸಾಹಿತ್ಯೇತ್ತರ 14, ಮತ್ತು ಆಂಗ್ಲ ಭಾಷೆಯಲ್ಲಿ 6 ಕೃತಿಗಳನ್ನು ರಚಿಸಿದ್ದಾರೆ. ಹೀಗೆ 500ಕ್ಕೂ ಹೆಚ್ಚು ಸಾಹಿತ್ಯ, ಸಾಹಿತ್ಯೇತ್ತರ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ ಕಾರಂತರಿಗೆ ‘ಕಾರಂತರ ಸಾಹಿತ್ಯವೆಲ್ಲಾ ಕನ್ನಡದಲ್ಲಿವೆ ಎಂಬ ಕಾರಣಕ್ಕೆ ‘ನೊಬೆಲ್ ಪ್ರಶಸ್ತಿ’ ಬರಲಿಲ್ಲ. ಅವರಷ್ಟು ಬರೆದವರು ವಿರಳ; ಅವರಷ್ಟು ದುಡಿದವರು ವಿರಳ. 1936 ರ ಮೇ 6ರಂದು ಲೀಲಾ ಅವರನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡ ಕಾರಂತರಿಗೆ, ಹರ್ಷ, ಕ್ಷಮಾ, ಉಲ್ಲಾಸ, ಮಾಲವಿಕ ಎಂಬ ನಾಲ್ಕು ಮಕ್ಕಳ ತುಂಬು ಸಂಸಾರದ ಬಾಳ ಬಂಡಿಯನ್ನು ನಡೆಸಿದ ಕಾರಂತರು 1997 ಡಿಸೆಂಬರ್ 9 ರಲ್ಲಿ ಕಾಲನ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆಯನ್ನು ಮುಗಿಸಿದರು. ಸಾಹಿತ್ಯ ಲೋಕದ ದಿಗ್ಗಜಕೊಂಡಿಯೊಂದು ಕಳಚಿತು. ಸಾಹಿತ್ಯ ಲೋಕದಲ್ಲಿ ತುಂಬಲಾರದ ನಷ್ಟವಾಗಿ ತೋರಿತು. ಇವರ ಪಾರ್ಥಿವ ಶರೀರವನ್ನು ಇವರ ಜನ್ಮಭೂಮಿಯಾದ ಕೋಟದ ಸ್ವಗೃಹದಲ್ಲಿ ಸಕಲ ಸರಕಾರಿ ಗೌರವದೊಂದೊಗೆ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಇಡೀ ಕರ್ನಾಟಕ ರಾಜ್ಯ ಶೋಕಾಚರಣೆಯ ಮೂಲಕ ಅಗಲಿದ ಕಾರಂತರ ದಿವ್ಯ ಆತ್ಮಕ್ಕೆ ಶಾಂತಿಕೋರಿದರು. ಕಡಲ ತಡಿಯ ಭಾರ್ಗವ ನಡೆದಾಡುವ ವಿಶ್ವಕೋಶ ಕಾರಂತರನ್ನು ಕಳೆದುಕೊಂಡ ಕೋಟ ಅಕ್ಷರಶಃ ಸೊರಗಿದ್ದು ಇತಿಹಾಸ. ಕಾರಂತ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ಹಂಬಲ ಕೋಟ ಜನತೆಯದು ಅಂತೆಯೇ 2005ರಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಎಂಬ ಪ್ರಶಸ್ತಿಯನ್ನು ಹುಟ್ಟು ಹಾಕಿ ಕಾರಂತರ ಆಸಕ್ತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು 2008ರಲ್ಲಿ ಕಾರಂತರ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಂದಿದ್ದ ಅಂದಿನ ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಬಿ. ವೈ ಎಸ್. ಯಡಿಯೂರಪ್ಪನವರು ಒಂದು ಕೋಟಿ ರೂ.ಗಳನ್ನು ಕಾರಂತ ಸ್ಮಾರಕಕ್ಕೆ ನೀಡುವುದಾಗಿ ಘೋಷಿಸಿದರು ಅಲ್ಲಿಂದ ಮತ್ತೆ ಚಿಗುರೊಡೆದ ಕಾರಂತ ಸ್ಮಾರಕ ನಿರ್ಮಾಣದ ಕನಸು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟದವರೆ ಆದ ಕೋಟ ಶ್ರೀನಿವಾಸ ಪೂಜಾರಿಯವರ ಸಹಕಾರದೊಂದಿಗೆ ಸರಿ ಸುಮಾರು 2.25 ಕೋಟಿ ವೆಚ್ಚದಲ್ಲಿ ನಿಮರ್ಾಣಗೊಂಡ ಕಾರಂತ ಥೀಂ ಪಾರ್ಕ್ 12/10/2011 ರಲ್ಲಿ ಲೋಕಾರ್ಪಣೆಗೊಂಡಿತು. ಅಂದು ನಿರ್ಮಾಣಗೊಂಡ ಕಾರಂತ ಥೀಂ ಪಾರ್ಕ್ ನಲ್ಲಿ ಒಡಲು ಖಾಲಿ ಖಾಲಿಯಾಗಿತ್ತು. ಆದರೆ ಅದರ ಒಡಲನ್ನು ತುಂಬುವಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರ ಕಾರ್ಯ ಇಂದಿಗೂ ಮುಂದುವರಿದಿರುವುದು ಶ್ಲಾಘನೀಯ. ಕಾರಂತ ಥೀಂ ಪಾರ್ಕ್ ಇಂದು ಸ್ವಚ್ಛವಾಗಿ ಹಾಗೂ ಸುಂದರವಾಗಿ ತಲೆಯೆತ್ತಿ ನಿಂತಿದೆ. ಕಲಾರಸಿಕರನ್ನು, ಸಾಹಿತ್ಯಾಭಿಮಾನಿಗಳನ್ನು, ಕಾರಂತಾಭಿಮಾನಿಗಳನ್ನು, ತನ್ನತ್ತ ಸೆಳೆಯುವಲ್ಲಿ ಕೋಟದ ಜನತೆ, ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಥೀಂ ಪಾರ್ಕ್ ನ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಈ ಕಾರಂತ ಥೀಂ ಪಾರ್ಕ್ ನ ಮೂಲಕ ಕಾರಂತರ ಹೆಸರನ್ನು ಅಜರಾಮರವಾಗಿಸಲು ಸಹಕರಿಸಿದ ಸರಕಾರಕ್ಕೂ, ಜನಪ್ರತಿನಿಧಿಗಳಿಗೂ, ಹಾಗೂ ಊರ ಜನತೆಗೆ ವಂದನೆಗಳನ್ನು ಹೇಳಲೇಬೇಕಾಗಿದೆ. ಕಾರಂತರ ಕಾಯ ಅಳಿಯಿತು ಕಾರಂತರು ಅಳಿಯಲಿಲ್ಲ ಮತ್ತೆ ಇಲ್ಲಿ ತಲೆಯೆತ್ತಿ ನಿಂತಿದ್ದಾರೆ. ಕೋಟ ಜನತೆಯ ಕಾರಂತರ ಬಗೆಗಿನ ಹಂಬಲ ಮತ್ತು ಆಶಯ ಕಾರಂತ ಥೀಂ ಪಾರ್ಕ್ ನಲ್ಲಿ ಮೂಲಕ ಸಹಕಾರಗೊಂಡಿದೆ. ಈ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂಬ ಹಾರೈಕೆಯೊಂದಿಗೆ