ಪುಟಾಣಿಗಳ ಕುಂಛದಲ್ಲಿ ಅರಳಿದ ಚಿತ್ರ ಸಂತೆ
ಕೋಟ:ನೂರಾರು ಪುಟಾಣಿಗಳ ಒಂದೆಡೆ ಕಲರವ ಮಕ್ಕಳ ಕೈಯಲ್ಲಿ ವಿವಿಧ ಬಣ್ಣಗಳ ಕರಮತ್ತು ಹಾಳೆಗಳ ಮೇಲೆ ಮಕ್ಕಳ ಬಣ್ಣಗಳ ಆಟ ನೋಡಿ ಮೂಕಸ್ಮಿತರಾದ ಪ್ರೇಕ್ಷಕರು……ಇದು ಕಂಡು ಬಂದಿದ್ದು ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ.ಡಾ|| ಕಾರಂತ ಪ್ರತಿಷ್ಠಾನ(ರಿ)ಕೋಟ,ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ ಕೋಟತಟ್ಟು ಗ್ರಾಮ ಪಂಚಾಯತ್,ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್,ಅವರ ಸಾರಥ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಪರಿಷೆ-2020(ಬಣ್ಣಗಳ ದೀಪ) ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.
ಜನವರಿ 26 ರಂದು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಮಕ್ಕಳಿಗೆ ಆಯೋಜಿಸಲಾಗಿತ್ತು.ಜಿಲ್ಲೆಯ ವಿವಿಧ ಕಡೆಯಿಂದ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸಬ್ ಜ್ಯೂನಿಯರ್,ಜ್ಯೂನಿಯರ್,ಸೀನಿಯರ್ ಮೂರು ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.ಸಬ್ ಜ್ಯೂನಿಯರ್,ಹಾಗೂ ಜ್ಯೂನಿಯರ್ ವಿದ್ಯಾರ್ಥಿಗಳಿಗೆ ಐಚ್ಚಿಕ ವಿಷಯ ನೀಡಲಾಗಿದ್ದು ಜ್ಯೂನಿಯರ್ ವಿಭಾಗದ ವಿದ್ಯಾರ್ಥಿಗಳಿಗೆ ಜಾತ್ರೆ ಎಂಬ ವಿಷಯ ನೀಡಲಾಗಿತ್ತು.ಮಕ್ಕಳ ಬಣ್ಣ -ಬಣ್ಣದ ಕಲಾತ್ಮಕ ಚಿತ್ರಗಳಿಗೆ ಆಗಮಿಸಿದ ಪೋಷಕರು,ಪ್ರೇಕ್ಷಕರು ಮನಸೊತಿದ್ದು ಸುಳಲ್ಲ.
ಚಿತ್ರಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳು
♥ಸಬ್ ಜ್ಯೂನಿಯರ್ ವಿಭಾಗ♥
1.ಪ್ರಥಮ-ಯಕ್ಷತ್-ವಿಶ್ವ ವಿನಾಯಕ ಶಾಲೆ ತೆಕ್ಕಟ್ಟೆ

2.ದ್ವಿತೀಯ-ಶರಧಿ ಎಸ್-ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರ್ಕಾಡಿ

3.ತೃತೀಯ-ಜಯನ್ ಶೇಖ್-ಇಂದ್ರಾಳಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಉಡುಪಿ

♥ಜ್ಯೂನಿಯರ್ ವಿಭಾಗ♥
1.ಪ್ರಥಮ-ದೀಪಿಕಾ ಭಟ್-ಸಂತ ಸಿಸಿಲಿಸ್ ಇಂಗ್ಲೀಷ್ ಮೀಡಿಯಮ್ಉಡುಪಿ

2.ದ್ವಿತೀಯ-ಕೆ.ಪ್ರತಿಷ್ಟಾ ಶೇಟ್-ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ

3.ತ್ರತೀಯ-ದಿೃತಿ.ಎಸ್-ಜಿ.ಮ್.ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ

♥ಸೀನಿಯರ್ ವಿಭಾಗ♥
1.ಪ್ರಥಮ-ಕೆ.ಆದರ್ಶ ಭಟ್-ಟಿ.ಎ.ಪೈ.ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಕುಂಜಿಬೆಟ್ಟು ಉಡುಪಿ.

2.ದ್ವಿತೀಯ-ಲಾವಣ್ಯ ಯು ರಾವ್-ಮಿಲಾಗ್ರಿಸ್ ಇಂಗ್ಲೀಷ್ ಮೀಡಿಯಮ್ ಕಲ್ಯಾಣಪುರ

3.ಉದೀತಾ ಕಾಮತ್-ಲಿಟ್ಲ ರಾಕ್ ಇಂಗ್ಲೀಷ್ ಮೀಡಿಯಮ್ ಬ್ರಹ್ಮಾವರ


