ಕಾರಂತ ಥೀಮ್ ಪಾರ್ಕ್ ಗೆ ASP ಹರಿರಾಮ್ ಶಂಕರ್ ಭೇಟಿ

ಕೋಟ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ASP ಹರಿರಾಮ್ ಶಂಕರ್ ಅವರು ಭೇಟಿ ನೀಡಿ ಕಾರಂತರ ಪ್ರತಿಮೆಗೆ ಮಾಲಾರ್ಪಣೆ ಮಾಡಿ,ರಂಗ ಮಂದಿರ,ಆರ್ಟ್ ಗ್ಯಾಲರಿ,ಗ್ರಂಥಾಲಯ ವನ್ನು ವೀಕ್ಷಿಸಿದರು.ಗ್ರಂಥಾಲಯದಲ್ಲಿರುವ ಪುಸ್ತಕದ ಭಂಡಾರ,ಸ್ಪರ್ಧಾತ್ಮಕ ಪುಸ್ತಕದ ಸಂಗ್ರಹದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.ಗ್ರಾಮ ಪಂಚಾಯತ್ ಗ್ರಂಥಾಲಯವಾದರೂ ಜಿಲ್ಲಾ ಗ್ರಂಥಾಲಯದಷ್ಟು ಅಭಿವೃದ್ಧಿ ಹೊಂದಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ದ.ಕ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಶ್ರೀ ಹರೀಶ್ ಕುಮಾರ್ ಶೆಟ್ಟಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿಗಳಾದ ಶ್ರೀ ಸತೀಶ್ ವಡ್ಡರ್ಸೆ,ಶ್ರೀ ರಾಜಶೇಖರ್ ಕೋಟ,ಉಡುಪಿ ಶಾಸಕರ ಆಪ್ತ ಸಹಾಯಕರಾದ ಗಿರೀಶ್ ಕುಮಾರ್ ಶೆಟ್ಟಿ,ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.

